ಭದ್ರಾವತಿಯಲ್ಲಿ ಘನ ತ್ಯಾಜ್ಯದ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಘನ ತ್ಯಾಜ್ಯವನ್ನು ಮನೆ, ಹೋಟೆಲ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಅವು ಉತ್ಪತ್ತಿಯಾಗುವ ಮೂಲದಲ್ಲಿಯೇ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ಹೀಗಿರುವಾಗ ನದಿಗೆ ತ್ಯಾಜ್ಯ ಎಸೆದು ಮಲಿನಗೊಳಿಸುವುದು ಅಪರಾಧ. ಮುಂಬರುವ ದಿನಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಗುರುತಿಸಿ ದಂಡ ಹಾಕಲು, ಸೇತುವೆಯ ಬಳಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು
– ಹೇಮಂತ್ ಎನ್, ನಗರಸಭೆ ಆಯುಕ್ತ
ಸೇತುವೆಗಳ ಬಳಿ ಲೋಹದ ಗ್ರಿಲ್ ಅಳವಡಿಸುವುದರಿಂದ ನದಿಗೆ ಹಾಗೂ ನದಿ ದಂಡೆಗೆ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬಹುದು. ನದಿ ತೀರವನ್ನು ತ್ಯಾಜ್ಯದ ಗುಂಡಿಯನ್ನಾಗಿ ಮಾಡಲಾಗಿದೆ. ನದಿ ನೀರು ಮಲಿನವಾಗುತ್ತಿರುವುದರಿಂದ ಮಾನವನ ಆರೋಗ್ಯ ಹಾಗೂ ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸುವುದರಿಂದ, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು