ಭದ್ರಾವತಿ: ದ್ವೇಷದ ಕಾರಣ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಅಪರಾಧಿಗೆ ಇಲ್ಲಿನ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಆತನ ಐವರು ಸಹಚರರಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಭದ್ರಾವತಿ ನಗರದ ನಿವಾಸಿಗಳಾದ ಅಜೇಯ, ತೇಜಸ್ವಿ, ಮನೋಜ, ಆದರ್ಶ, ಅರುಣ ಹಾಗೂ ಪಾನಿಪುರಿ ರಂಗ ಶಿಕ್ಷೆಗೊಳಗಾದವರು.

ಇವರು 2020ರ ಮೇ 10ರಂದು ನಗರದ ಜಿಂಕ್ಲೈನ್– ವೀರಾಪುರ ರಸ್ತೆ ಬಳಿಯ ತೆಂಗಿನ ತೋಟದಲ್ಲಿ ಗುಂಪು ಕಟ್ಟಿಕೊಂಡು ಮಂಜುನಾಥ್ ಎಂಬ ಯುವಕನನ್ನು ಹಳೇ ದ್ವೇಷದ ಕಾರಣಕ್ಕೆ ದೊಣ್ಣೆಗಳಿಂದ ಹೊಡೆದಿದ್ದರು. ನಂತರ ಆತನನ್ನು ಬಿಗಿಯಾಗಿ ಹಿಡಿದುಕೊಂಡು ಕೊಲ್ಲುವ ಉದ್ದೇಶದಿಂದ ಮತ್ತೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದರು.

ನ್ಯೂಟೌನ್ ಠಾಣೆ ಪೊಲೀಸರು ಅಜೇಯನನ್ನು ಮೊದಲನೇ ಆರೋಪಿಯಾಗಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಐವರನ್ನು ಸಹ ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿದ್ದರು.

ಆರೋಪ ಸಾಬೀತಾದ ಕಾರಣ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ ಒಟ್ಟು ₹ 2.30 ಲಕ್ಷ ದಂಡ ವಿಧಿಸಿರುವ ನ್ಯಾಯಾಲಯ, ಘಟನೆಯಲ್ಲಿ ನೊಂದಿರುವ ಮಂಜುನಾಥ್ಗೆ ₹ 1.50 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-44-940562492

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.