ಭದ್ರಾವತಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ಗೆ ಹೊಂದಿಕೊಂಡಂತೆ ಇರುವ ಗೂಡಂಗಡಿಗಳನ್ನು ಗುರುವಾರ ತೆರವು ಮಾಡುವ ಮೂಲಕ ಚನ್ನಗಿರಿ (ಸಿ.ಎನ್) ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಮಾಧವಾಚಾರ್ ವೃತ್ತದಿಂದ ರಂಗಪ್ಪ ವೃತ್ತದ ಮೂಲಕ ಎಪಿಎಂಸಿ ಪ್ರಾಂಗಣದ ಮುಂಭಾಗದವರೆಗೆ 1.30 ಕಿ.ಮೀ. ಉದ್ದದ ಚನ್ನಗಿರಿ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕಾಮಗಾರಿಗೆ ₹ 9.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಆರಂಭದಲ್ಲಿ ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ ತಲಾ 50 ಅಡಿಯಂತೆ ಒಟ್ಟು 100 ಅಡಿ ಅಗಲದ ರಸ್ತೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿತ್ತು. ನಂತರ ಇಲ್ಲಿನ ಕಟ್ಟಡ ಮಾಲೀಕರ ಒತ್ತಾಯಕ್ಕೆ ಮಣಿದು, ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ ತಲಾ 40 ಅಡಿಯಂತೆ ಒಟ್ಟು 80 ಅಡಿ ಅಗಲದ ರಸ್ತೆ ವಿಸ್ತರಣೆ ಮಾಡಲು ನಿಶ್ಚಯಿಸಲಾಗಿತ್ತು.

ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ, ರಸ್ತೆಯ ಮಧ್ಯಭಾಗದಿಂದ ಎರಡೂ ಬದಿಗೆ ತಲಾ 76 ಅಡಿಗಳ ಜಾಗ ಸರ್ಕಾರಕ್ಕೆ ಸೇರಿದೆಯಾದ್ದರಿಂದ, ಹಾಲಿ ವಿಸ್ತರಣೆಗೆ ತೆರುವುಗೊಳಿಸಬೇಕಾಗಿರುವ ಖಾಸಗಿ ಕಟ್ಟಡಗಳು ಸರ್ಕಾರಿ ಜಾಗದಲ್ಲಿ ಇರುವುದರಿಂದ, ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ತೆರವುಗೊಳ್ಳಲಿರುವ ಕಟ್ಟಡಗಳಿಗೆ ಪರಿಹಾರ ನೀಡದೆ ರಸ್ತೆ ವಿಸ್ತರಣೆ ನಡೆಸಲು ತೀರ್ಮಾನಿಸಲಾಗಿತ್ತು.

ರಸ್ತೆ ವಿಸ್ತರಣೆಯ ಬಗ್ಗೆ ಚರ್ಚಿಸಲು ಈಚೆಗೆ ನಗರಸಭೆ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ, ‘ರಸ್ತೆ ವಿಸ್ತರಣೆ ವಿಚಾರವಾಗಿ ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ’ ಎಂದು ಚನ್ನಗಿರಿ ರಸ್ತೆಯಲ್ಲಿನ ಕಟ್ಟಡಗಳ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಕ್ರಮಬದ್ಧವಾಗಿ ನೋಟಿಸ್ ನೀಡದೆ ಕಾಮಗಾರಿ ಆರಂಭಿಸುವ ಹುನ್ನಾರ ನಡೆದಿದೆ’ ಎಂದೂ ಆರೋಪಿಸಿದ್ದರು.

ಇದಕ್ಕೆ ಉತ್ತರ ನೀಡಿದ್ದ ನಗರಸಭೆ ಆಯುಕ್ತ ಹೇಮಂತ್ ಎನ್, ‘ಎಂಟು ತಿಂಗಳ ಹಿಂದೆಯೇ ಜಾಗದ ಅಳತೆ ಮಾಡಿ, ವಿಸ್ತರಣೆಗೆ ಗುರುತು ಮಾಡಲಾಗಿದೆ. ದಾಖಲೆಗಳ ಪ್ರಕಾರ ರಸ್ತೆ ವಿಸ್ತರಣೆಯಾಗಲಿರುವ ಜಾಗ ಕೂಡ ಸರ್ಕಾರಕ್ಕೆ ಸೇರಿದ್ದು. ಕಟ್ಟಡ ಮಾಲೀಕರು ಸ್ವಯಂಪ್ರೇರಣೆಯಿಂದ ವಿಸ್ತರಣೆಗೆ ಗುರುತಿಸಿರುವ ಜಾಗದವರೆಗಿನ ಕಟ್ಟಡ ತೆರವು ಮಾಡಬೇಕು’ ಎಂದು ಸಭೆಗೆ ತಿಳಿಸಿದ್ದರು.

ಗುರುವಾರ ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ಗೆ ಹೊಂದಿ ಕೊಂಡಂತೆ ಇರುವ 14 ಗೂಡಂಗಡಿಗಳ ವ್ಯಾಪಾರಿಗಳಿಗೆ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಜೆ 4ರ ಒಳಗೆ ತಮ್ಮ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಹೇಳಿದರು. ಸಂಜೆ ನಗರಸಭೆ ವತಿಯಿಂದ ಜೆಸಿಬಿ ಯಂತ್ರ ಬಳಸಿ ವ್ಯಾಪಾರಿಗಳು ಅಲ್ಲಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶೆಡ್ಗಳನ್ನು ತೆರವುಗೊಳಿಸಲಾಯಿತು.

ಗೂಡಂಗಳಿಗಳ ತೆರವು ಕಾರ್ಯಾ ಚರಣೆಗೆ ವ್ಯಾಪಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಕೆಲವು ಹಣ್ಣಿನ ವ್ಯಾಪಾರಿಗಳು ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿ ದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-42-471921913

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.