ಭದ್ರಾವತಿ: ಇಲ್ಲಿನ ಗ್ರಾಮದೇವತೆ ಹಳದಮ್ಮ ದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 20ರಿಂದ 26ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಹಳದಮ್ಮ ದೇವಾಲಯ ಸಮಿತಿ ಕಾರ್ಯದರ್ಶಿ ಸಂತೋಷ್ ಬಿ.ಎಂ. ಹೇಳಿದರು.

‘ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ.20ರಂದು ಹೊಸ ಸಿಡಿ ಮರ ಪ್ರತಿಷ್ಠಾಪನೆ ಹಾಗೂ ಧ್ವಜಾರೋಹಣದೊಂದಿಗೆ ಜಾತ್ರಾ ಮಹೋತ್ಸವ ವಿಧ್ಯುಕ್ತವಾಗಿ ಆರಂಭವಾಗಲಿದೆ. 21ರ ಬೆಳಿಗ್ಗೆ 8 ಗಂಟೆಗೆ ಹಳದಮ್ಮ, ಕೆರೆಕೋಡಮ್ಮ ಹಾಗೂ ಕೆಂಚಮ್ಮ ದೇವಿಯರಿಗೆ ಅಭಿಷೇಕ, 11ಕ್ಕೆ ಮಹಾಮಂಗಳಾರತಿ, ಅನ್ನದಾನ ನಡೆಯಲಿದೆ. ಅಂದು ರಾತ್ರಿ 8ಕ್ಕೆ ದೇವಾಲಯದ ಆವರಣದಿಂದ ದೇವತೆಗಳ ರಾಜಬೀದಿ ಉತ್ಸವ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಹುಲಿವೇಷ, ಚಿಟ್ಟಿಮೇಳ, ಡೊಳ್ಳು, ಚಂಡೆ ಹಾಗೂ ತಮಟೆ ಕಲಾ ತಂಡಗಳು ಪ್ರದರ್ಶನ ನೀಡಲಿವೆ.

‘ಮೆರವಣಿಗೆಯು ಕಂಚಿ ಬಾಗಿಲು, ರಂಗಪ್ಪ ವೃತ್ತ, ಹೊಸಮನೆ ರಸ್ತೆ, ಶಿವಾಜಿ ವೃತ್ತ, ಮಾಧವಾಚಾರ್ ವೃತ್ತದ ಮೂಲಕ ಸಾಗಿ ಮರುದಿನ ಬೆಳಿಗ್ಗೆ 5 ಗಂಟೆಗೆ ಭದ್ರಾ ನದಿ ತೀರವನ್ನು ತಲುಪಲಿದೆ. ಅಲ್ಲಿ ಗಂಗಾ ಪೂಜೆ ಬಳಿಕ ದೇವತಾ ಮೂರ್ತಿಗಳು ಗದ್ದುಗೆ ಪೂಜೆಯೊಂದಿಗೆ ದೇವಾಲಯ ಪ್ರವೇಶ ಮಾಡಲಿವೆ’ ಎಂದರು.

‘23ರ ಬೆಳಿಗ್ಗೆ 6 ಗಂಟೆಗೆ ಸಿಡಿ ಉತ್ಸವ ನಡೆಯಲಿದೆ. ಈ ವರ್ಷದ ಜಾತ್ರೆಗೆ ಹೊಸ ಸಿಡಿ ಪ್ರತಿಷ್ಠಾಪಿಸಲಾಗಿದೆ. ಸಂಜೆ 6.30ಕ್ಕೆ ದೇವಾಲಯದ ಮುಂಭಾಗದಲ್ಲಿ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 24ರ ಮಧ್ಯಾಹ್ನ 3.30ಕ್ಕೆ ಕನಕ ಮಂಟಪದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿ ನಡೆಯಲಿದೆ. ನಗರಸಭೆ ಅಧ್ಯಕ್ಷೆ ಬಿ.ಸಿ. ಗೀತಾ ರಾಜಕುಮಾರ್ ಟೂರ್ನಿ ಉದ್ಘಾಟಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಹಳದಮ್ಮ ದೇವಾಲಯ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಪದಾಧಿಕಾರಿಗಳಾದ ಜಯಪ್ರಕಾಶ್, ಕೃಷ್ಣಪ್ಪ, ಶ್ರೀನಿವಾಸ್, ಮಂಜುನಾಥ್, ಮಾರುತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-42-1769079927

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.