ಭದ್ರಾವತಿ: ‘ಕಾಮ್ರೇಡ್ ಡಿ.ಸಿ. ಮಾಯಣ್ಣ ವೃತ್ತವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಹೇಳಿದರು.

ಇಲ್ಲಿನ ಹುತ್ತಾ ಬಸ್ ನಿಲ್ದಾಣ ಸಮೀಪ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಕಾಮ್ರೇಡ್ ಡಿ.ಸಿ. ಮಾಯಣ್ಣ ವೃತ್ತವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

‘ವೃತ್ತದ ಬಳಿ ಈಗ ನಾಲ್ಕು ಕಲ್ಲಿನ ಆಸನಗಳಿವೆ. ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಮಿಕರು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಮುಂಜಾನೆ ಹಾಗೂ ಸಂಜೆ ವಾಯುವಿಹಾರದ ನಂತರ ಅವರು ಇಲ್ಲಿ ವಿಶ್ರಮಿಸಲು ಅನುಕೂಲವಾಗುವಂತೆ ಐದು ಹೆಚ್ಚುವರಿ ಕಲ್ಲಿನ ಆಸನಗಳನ್ನು ಅಳವಡಿಸಲಾಗುವುದು’ ಎಂದರು.

‘ಈ ಪ್ರದೇಶದಲ್ಲಿ ಶಾಲೆ– ಕಾಲೇಜುಗಳು ಇರುವುದರಿಂದ, ವಿದ್ಯಾರ್ಥಿಗಳಲ್ಲಿ ತಮ್ಮ ಊರಿನ ಬಗ್ಗೆ ಹಾಗೂ ನಾಡಿನ ಜಾನಪದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸಲು ಇಲ್ಲಿ ನಾಮಫಲಕ ಹಾಗೂ ಕಲಾಕೃತಿಗಳನ್ನೂ ಸ್ಥಾಪಿಸಲಾಗಿದೆ. ಈ ಕಾರ್ಯಕ್ಕೆ ಒಟ್ಟು ₹ 52 ಲಕ್ಷ ವೆಚ್ಚ ಮಾಡಲಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೈಪಾಸ್ ವೃತ್ತದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಮುಗಿದ ನಂತರ, ಈ ವೃತ್ತದ ಬಳಿ ಆಕರ್ಷಣೀಯ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು’ ಎಂದು ತಿಳಿಸಿದರು.

ನಾಮಫಲಕ ಹಾಗೂ ಸಿಮೆಂಟ್ ಕಲಾಕೃತಿಗಳನ್ನು ವಿನ್ಯಾಸ ಮಾಡಿರುವ ಕಲಾವಿದರಾದ ವಿಷ್ಣು, ಬಾಲಾಜಿ ಹಾಗೂ ಅವರ ಸಹಾಯಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರೀನಾರಾಯಣ್, ಆಯುಕ್ತ ಹೇಮಂತ್ ಎನ್., ಕಬಡ್ಡಿ ಆಟಗಾರ ಕೃಷ್ಣೇಗೌಡ ಉಪಸ್ಥಿತರಿದ್ದರು.

ವೃತ್ತಗಳಿಗೆ ನಾಮಕರಣ: ಕಾರ್ಯಕ್ರಮ ದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಬಿ.ಕೆ. ಮೋಹನ್, ಭದ್ರಾವತಿಯ ಕೈಗಾರಿಕೀಕರಣಕ್ಕೆ ಶ್ರಮಿಸಿದ ಮೈಸೂರು ಅರಸರ ಕೊಡುಗೆಯನ್ನು ಸ್ಮರಿಸಲು ಇಲ್ಲಿನ ಜಯಶ್ರೀ ವೃತ್ತಕ್ಕೆ ‘ಜಯಚಾಮರಾಜೇಂದ್ರ ಒಡೆಯರ್’ ಅವರ ಹೆಸರನ್ನು, ಅಂತರಗಂಗೆ ಕ್ರಾಸ್ ಬಳಿಯ ವೃತ್ತಕ್ಕೆ ‘ಮಹರ್ಷಿ ವಾಲ್ಮೀಕಿ’ ಹೆಸರನ್ನು, ಹುಡ್ಕೋ ಕಾಲೊನಿ ಬಳಿಯ ವೃತ್ತಕ್ಕೆ ದಲಿತ ನಾಯಕ ‘ಪ್ರೊ.ಬಿ. ಕೃಷ್ಣಪ್ಪ’ ಅವರ ಹೆಸರನ್ನು ಇರಿಸಲಾಗುವುದು. ಮಾಧವಾಚಾರ್ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆಗೆ ‘ಮಹಾತ್ಮ ಗಾಂಧಿ ರಸ್ತೆ’ ಎಂದು ನಾಮಕರಣ ಮಾಡಲಾಗುವುದು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-42-1016642382

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.