ಭದ್ರಾವತಿ: ಹೃದಯಾಘಾತದಿಂದ ಮೃತಪಟ್ಟ ಮಗಳ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಮಾನವೀಯತೆ ಮೆರೆದಿದ್ದಾರೆ.

ಇಲ್ಲಿನ ಸುಭಾಷ್ ನಗರದ ನಿವಾಸಿ ಕೀರ್ತನಾ ಕೆ.(23) ಭಾನುವಾರ ಮೃತಪಟ್ಟಿದ್ದರು. ಅವರ ಅಂಗಾಂಗಗಳನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಲಾಗಿದೆ.

ಕೀರ್ತನಾ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

‘ಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ, ಹಲವು ಬಾರಿ ನನ್ನ ಬಳಿ ಸಾವಿನ ನಂತರ ಅಂಗಾಂಗ ದಾನ ಮಾಡುವ ಇಂಗಿತ ವ್ಯಕ್ತಪಡಿಸಿದ್ದಳು. ಅವಳ ಇಚ್ಛೆಯಂತೆ ಈ ಕಾರ್ಯ ನಡೆಸಿದ್ದೇವೆ’ ಎಂದು ಕೀರ್ತನಾ ತಂದೆ ಕುಮಾರ್ ವಿ. ಹೇಳಿದರು.

‘ಮಗಳನ್ನು ಕಳೆದುಕೊಂಡ ದುಃಖ ಇದೆ. ಆದರೆ ಸಾವಿನ ನಂತರವೂ ಆಕೆ ಸಾರ್ಥಕತೆ ಮೆರೆದ ಹೆಮ್ಮೆ ನಮ್ಮದು’ ಎಂದು ತಾಯಿ ಲೀಲಾ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-44-616523282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.