ಭದ್ರಾವತಿ: ‘ವೀರಶೈವ ಸೇವಾ ಸಮಿತಿಯಿಂದ ಇಲ್ಲಿನ ಮಾಧವಾಚಾರ್ ವೃತ್ತದ ಬಳಿ ಇರುವ ಸಂತ ಸದಾನಂದ ಸ್ವಾಮೀಜಿ ಗದ್ದುಗೆಯನ್ನು ಶ್ರದ್ಧಾ ಭಕ್ತಿಯ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್. ಮಹೇಶ್ ಕುಮಾರ್ ತಿಳಿಸಿದರು.

ಈಚೆಗೆ ಸಂತ ಸದಾನಂದ ಸ್ವಾಮೀಜಿ ಗದ್ದುಗೆಯ ಜೀರ್ಣೋದ್ಧಾರ ಕಾರ್ಯದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಸದಾನಂದ ಸ್ವಾಮೀಜಿ ಭದ್ರಾವತಿಯ ಜನರಿಗೆ ಧಾರ್ಮಿಕ ಸಂಸ್ಕಾರ ನೀಡಿದ ಮಹಾತ್ಮರು. ಅವರ ಗದ್ದುಗೆ ಜೀರ್ಣಾವಸ್ಥೆ ತಲುಪಿದ್ದು, ಅದರ ಜೀರ್ಣೋದ್ಧಾರ ಮಾಡಬೇಕೆಂಬುದು ಭಕ್ತರ ಬಹುದಿನದ ಆಸೆಯಾಗಿತ್ತು’ ಎಂದು ಹೇಳಿದರು.

‘ಶಿವಯೋಗದ ಜ್ಞಾನವನ್ನು ಪ್ರಚಾರಪಡಿಸುವುದು ಜೀರ್ಣೋದ್ಧಾರ ಯೋಜನೆಯ ಉದ್ದೇಶ. ಈ ಕಾರ್ಯದ ಅಂಗವಾಗಿ, ಈ ಸ್ಥಳದಲ್ಲಿ ಸದಾನಂದ ಸ್ವಾಮೀಜಿ ಮಠ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು’ ಎಂದರು.

ಸಮಿತಿ ಪದಾಧಿಕಾರಿಗಳಾದ ಟಿ.ಎಸ್. ಆನಂದ ಕುಮಾರ್, ವಾಗೀಶ್ ಕೋಠಿ, ನಿರಂಜನ್, ದೀಪಕ್, ಷಣ್ಮುಖಪ್ಪ, ಚನ್ನೇಶ್, ಚಂದ್ರಣ್ಣ, ಶಿವಾನಂದ, ಜಯಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-42-634715285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.