ಭದ್ರಾವತಿ: ‘ದಯವೇ ಧರ್ಮದ ಮೂಲ ಎಂದು ಸಾರಿದ ಬಸವಣ್ಣನವರ ವಿಚಾರಗಳನ್ನು ಜನಪ್ರಿಯಗೊಳಿಸುವ ಮೂಲಕ ಜಾಗತಿಕ ಶಾಂತಿ ಸ್ಥಾಪಿಸಬಹುದು’ ಎಂದು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಇಲ್ಲಿನ ಬಸವೇಶ್ವರ ಸಭಾ ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಜಗತ್ತಿನ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ, ಪರಿಸರ ಮಾಲಿನ್ಯ ಮೊದಲಾದ ಅಪಸವ್ಯಗಳಿಗೆ ಮಾನವನ ದುರಾಸೆಯೇ ಕಾರಣ. ಕ್ಷೋಭೆಯಲ್ಲಿ ಮುಳುಗಿರುವ ಜಗತ್ತಿಗೆ ಬಸವಣ್ಣ ಹಾಗೂ ಇನ್ನಿತರ ದಾರ್ಶನಿಕರ ವಿಚಾರಧಾರೆಗಳು ಶಾಂತಿ ನೀಡಬಲ್ಲವು’ ಎಂದು ತಿಳಿಸಿದರು.

‘ಫ.ಗು. ಹಳಕಟ್ಟಿಯವರ ಶ್ರಮದಿಂದ ವಚನ ಸಾಹಿತ್ಯದ ಸಂರಕ್ಷಣೆ ಸಾಧ್ಯವಾಯಿತು. ವಚನ ಸಾಹಿತ್ಯದ ಡಿಜಿಟಲೀಕರಣ ಹಾಗೂ ಬೇರೆ ಭಾಷೆಗಳಿಗೆ ಅನುವಾದಿಸುವ ಕಾರ್ಯ ನಡೆಯುತ್ತಿರುವುದು ಸ್ವಾಗತಾರ್ಹ. ಅನ್ಯ ರಾಷ್ಟ್ರಗಳಲ್ಲಿರುವ ಬಸವ ಸಮಿತಿಗಳು, ವಚನ ಸಾಹಿತ್ಯದ ಕುರಿತು ನಿರಂತರವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಗತ್ತಿನ ಮೂಲೆಮೂಲೆಗೂ ಶರಣ ತತ್ವವನ್ನು ಪಸರಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

‘ಮೂಢನಂಬಿಕೆ, ಸಾಮಾಜಿಕ ತಾರತಮ್ಯಗಳ ನಿವಾರಣೆಗೆ ಅವಿರತವಾಗಿ ಶ್ರಮಿಸಿದ ಬಸವಾದಿ ಶರಣರ ವಿಚಾರಧಾರೆಗಳ ಮಹತ್ವವನ್ನು ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಅರಿವೇ ಗುರು ಎಂಬುದು ವಚನ ಸಾಹಿತ್ಯದ ಮೂಲ ಸಂದೇಶಗಳಲ್ಲಿ ಒಂದು. ಸರಳ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ಬಸವಣ್ಣನವರು ಶ್ರಮಿಸಿದರು. ಕಾಯಕ, ದಾಸೋಹ ಮೊದಲಾದ ಬಸವ ತತ್ವದ ವಿಚಾರಗಳ ಬಗ್ಗೆ ಭಾಷಣ ಮಾಡಿದರಷ್ಟೇ ಸಾಲದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನಗಳಾಗಬೇಕು’ ಎಂದು ಹೇಳಿದರು.

ಶಾಸಕ ಬಿ.ಕೆ. ಸಂಗಮೇಶ್ವರ, ಖಜಾನೆ ಇಲಾಖೆ ಸಹಾಯಕ ನಿರ್ದೇಶಕಿ ಸಾವಿತ್ರಿ ಎಚ್.ಎಸ್., ಸಾಹಿತಿ ಕುಸುಮಾ ಆಯರಹಳ್ಳಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-42-193925732

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.