ಮಂಗಳವಾರ, ಮೇ 11, 2021
21 °C

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ನಗರಸಭೆ 35 ವಾರ್ಡ್‌ಗಳಲ್ಲಿ ಮೊದಲ ಪಟ್ಟಿಯಲ್ಲಿ 21 ಹೆಸರನ್ನು ಬಿಡುಗಡೆ ಮಾಡಿದ್ದ ಬಿಜೆಪಿ ಸೋಮವಾರ 13 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಟ್ಟಿ ಪ್ರಕಟಿಸಿದ‌ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ‘ಬಿಜೆಪಿ ಹಿರಿಯ ಮುಖಂಡ ಕದಿರೇಶ್ ಅವರಿಗೆ ವಾರ್ಡ್ –16ರಲ್ಲಿ ಸ್ಥಾನ ನೀಡಲಾಗಿದ್ದು, ವಾರ್ಡ್ –1 ಹಿಂದುಳಿದ ವರ್ಗ ‘ಎ’ ಮಹಿಳಾ ಮೀಸಲು ಸ್ಥಾನಕ್ಕೆ ಯಾವುದೇ ಅಭ್ಯರ್ಥಿಯನ್ನು ಘೋಷಿಸದೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಅದನ್ನು ಘೋಷಿಸುತ್ತೇವೆ’ ಎಂದು ತಿಳಿಸಿದರು.

ಮಾಜಿ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ವಿಭಾಗ ಪ್ರಮುಖ್ ಗಿರೀಶ ಪಟೇಲ್, ಕಾಡಾ ಅಧ್ಯಕ್ಷ ಪವಿತ್ರರಾಮಯ್ಯ, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಎಸ್. ದತ್ತಾತ್ರಿ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ ಇದ್ದರು.

ಇದಕ್ಕೂ ಮುನ್ನ ನಗರಸಭಾ ಚುನಾವಣಾ ಬಿಜೆಪಿ ಕಚೇರಿ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ವಿಶೇಷಪೂಜೆ ಆಯೋಜಿಸಲಾಗಿತ್ತು.

ಅಭ್ಯರ್ಥಿಗಳು: ವಾರ್ಡ್ 5 ಕೋಟೆ ಏರಿಯಾ– ಶಶಿಕಲಾ ನಾರಾಯಣಪ್ಪ, ವಾರ್ಡ್‌ 7ರ ದುರ್ಗಿಗುಡಿಯ ಖಲಂದರ್ ನಗರ–ಆಟೊಮೂರ್ತಿ, ವಾರ್ಡ್‌–8 ಅನ್ವರ್ ಕಾಲೊನಿ–ಸೀಗೆಬಾಗಿ ಅಮೀರ್ ಪಾಷಾ (ಸಾಮಾನ್ಯ ಕ್ಷೇತ್ರ), ವಾರ್ಡ್‌–9ರ ಭದ್ರಾ ಕಾಲೊನಿ– ಗಿರೀಶ್ (ಪರಿಶಿಷ್ಟ ಜಾತಿ), ವಾರ್ಡ್‌–13ರ ಭೂತನಗುಡಿ– ಸುನೀತಾ ಮೋಹನ್ (ಸಾಮಾನ್ಯ ಮಹಿಳೆ), ವಾರ್ಡ್‌–16ರ ಗಾಂಧಿನಗರ –ವಿ.ಕದಿರೇಶ್ (ಸಾಮಾನ್ಯ), ವಾರ್ಡ್‌ 17ರ ನೆಹರೂ ನಗರ–ಡಿ.ಎನ್. ರವಿಕುಮಾರ್, ವಾರ್ಡ್‌ 21ರ ಎಂಪಿಎಂ 6 ಮತ್ತು 8ನೇ ವಾರ್ಡ್‌ಗೆ ಅನುಷಾ (ಬಿಸಿಎಂ ‘ಎ’ ಮಹಿಳೆ), 22ರ ಉಜ್ಜೀನಿಪುರ– ಭರತ್ (ಸಾಮಾನ್ಯ), ವಾರ್ಡ್‌ 29ರ ಎನ್ಟಿಬಿ ಬಡಾವಣೆ– ರೂಪಾ ನಾಗರಾಜ್ (ಸಾಮಾನ್ಯ ಮಹಿಳೆ), ವಾರ್ಡ್‌ 33 ಹುತ್ತಾಕಾಲೊನಿ –ಶ್ರೀಧರಗೌಡ (ಸಾಮಾನ್ಯ), ವಾರ್ಡ್‌ 34 ಅಪ್ಪರ್ ಹುತ್ತಾ –ಶ್ಯಾಮಲಾ ಸತ್ಯಣ್ಣ (ಸಾಮಾನ್ಯ ಮಹಿಳೆ), ವಾರ್ಡ್‌ 35 ಭಂಡಾರಹಳ್ಳಿ– ಲಕ್ಷ್ಮಮ್ಮ ನರಸಿಂಹಗೌಡ (ಸಾಮಾನ್ಯ ಮಹಿಳೆ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು