ಶಿವಮೊಗ್ಗ: ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗ ಜಿಲ್ಲೆಗೆ ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್ನಲ್ಲಿ ಗಮನಾರ್ಹ ಪಾಲು ದೊರೆತಿದೆ. ಶುಕ್ರವಾರ ಮಂಡನೆಯಾದ ಬಜೆಟ್ನಲ್ಲಿ ಮೂರು ಪ್ರಮುಖ ಯೋಜನೆಗಳು ಘೋಷಣೆಯಾಗಿದ್ದು, ಉಳಿದಂತೆ ಹಳೆಯ ಯೋಜನೆಗಳ ಮರು ಪ್ರಸ್ತಾಪಿಸಿ ಹೆಚ್ಚುವರಿಯಾಗಿ ಹಣ ನೀಡಲಾಗಿದೆ.

ಅಡಿಕೆ ಬೆಳೆಯ ರೋಗ ನಿರ್ವಹಣೆ ಮತ್ತು ಉತ್ಪಾದಕತೆ ಹೆಚ್ಚಿಸುವ ಕುರಿತ ಸಂಶೋಧನೆಗೆ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ₹ 10 ಕೋಟಿ ನೀಡಲಾಗಿದೆ. ಶಿವಮೊಗ್ಗದಲ್ಲಿ ₹ 10 ಕೋಟಿ ವೆಚ್ಚದಲ್ಲಿ ವಿಧಿ–ವಿಜ್ಞಾನ ಪ್ರಯೋಗಾಲಯ ನಿರ್ಮಾಣ, ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಕೊಗರು–ಶಿಗ್ಲು ನದಿ ಪಾತ್ರದಲ್ಲಿ ಬೋಟ್ ಸೇವೆ ಆರಂಭ, ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಸಿರಿ ಯೋಜನೆಗಳಿಗೆ ₹ 75 ಕೋಟಿ, ಶಿವಮೊಗ್ಗ–ಶಿಕಾರಿಪುರ ರೈಲು ಮಾರ್ಗಕ್ಕೆ ₹ 150 ಕೋಟಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಶಿವಮೊಗ್ಗದಲ್ಲಿ ತಾತ್ಕಾಲಿಕ ವಸತಿ ಗೃಹ ನಿರ್ಮಾಣ, ಸಾಗರದಲ್ಲಿ ಭಾರಿ ವಾಹನ ಚಾಲಕರ ತರಬೇತಿಗಾಗಿ ಸ್ವಯಂ ಚಾಲಿತ ಚಾಲನಾ ಪಥ ನಿರ್ಮಾಣ ಇವು ಬಜೆಟ್ನಲ್ಲಿ ಹೊಸದಾಗಿ ಘೋಷಣೆ ಆಗಿವೆ.

ಜೋಗದಲ್ಲಿ ₹ 7,394 ಕೋಟಿ ವೆಚ್ಚದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲಾಂಟ್ ಹೆಸರಿನಲ್ಲಿ 1,000 ಮೆಗಾವ್ಯಾಟ್ ಸಾಮರ್ಥ್ಯದ ಹೊಸ ಪಂಪ್ಡ್ ಸ್ಟೋರೇಜ್ ಘಟಕ ಪಿಪಿಪಿ ಮಾದರಿಯಲ್ಲಿ ಸ್ಥಾಪನೆ. ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭ, ಶಿವಮೊಗ್ಗ, ಮೈಸೂರು, ಕಲಬುರಗಿಯಲ್ಲಿ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ನಿರ್ಮಾಣಕ್ಕೆ ₹ 202 ಕೋಟಿ ಅನುದಾನ ನೀಡಲಾಗಿದ್ದು, ಈ ಯೋಜನೆಗಳನ್ನು ಕಳೆದ ಬಜೆಟ್ನಲ್ಲಿಯೇ ಘೋಷಿಸಲಾಗಿತ್ತು. ಈ ಬಾರಿ ಮತ್ತೊಮ್ಮೆ ಪ್ರಸ್ತಾಪಿಸಿ ಹಣ ನೀಡಲಾಗಿದೆ.

ಮನೆ ಅಂಗಳದಲ್ಲೇ ವಿಧಿ–ವಿಜ್ಞಾನ ಪ್ರಯೋಗಾಲಯ

ಶಿವಮೊಗ್ಗದಲ್ಲಿ ₹ 10 ಕೋಟಿ ವೆಚ್ಚದಲ್ಲಿ ವಿಧಿ–ವಿಜ್ಞಾನ ಪ್ರಯೋಗಾಲಯ ಆರಂಭಕ್ಕೆ ಸರ್ಕಾರ ಮುಂದಾಗಿರುವುದು ಪೊಲೀಸ್ ಇಲಾಖೆಗೆ ಬಲ ತುಂಬಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ವಿಚಾರದಲ್ಲಿ ತವರು ಜಿಲ್ಲೆಯ ಪಕ್ಷಪಾತಿಯಾಗಿದ್ದಾರೆ.

ಅಪರಾಧ ಕೃತ್ಯಗಳು ನಡೆದಾಗ ಸಾಕ್ಷಿ–ಪುರಾವೆಗಳ ಸಂಗ್ರಹ ಹಾಗೂ ಲಭ್ಯ ಸಾಕ್ಷ್ಯಗಳ ಪರೀಕ್ಷಾ ವರದಿಗಾಗಿ ವಿಧಿ–ವಿಜ್ಞಾನ ಪ್ರಯೋಗಾಲಯ ನೆರವಾಗಲಿದೆ. ಇಲ್ಲಿಯವರೆಗೂ ಶಿವಮೊಗ್ಗದಲ್ಲಿ ನಡೆದ ಅಪರಾಧ ಕೃತ್ಯಗಳ, ಸಂಗ್ರಹಿಸಿದ ಸಾಕ್ಷ್ಯಗಳ ಖಚಿತತೆಗೆ ದಾವಣಗೆರೆ ಇಲ್ಲವೇ ಹುಬ್ಬಳ್ಳಿಯ ಪ್ರಯೋಗಾಲಯದ ಮೊರೆ ಹೋಗಬೇಕಿತ್ತು. ಇನ್ನು ಮುಂದೆ ಮನೆ ಅಂಗಳದಲ್ಲಿಯೇ ಪರೀಕ್ಷೆಗೆ ಅವಕಾಶವಾಗಲಿದೆ. ಇದರಿಂದ ಅಪರಾಧ ಕೃತ್ಯಗಳ ತನಿಖಾ ಪ್ರಕ್ರಿಯೆಗಳು ಇನ್ನಷ್ಟು ಚುರುಕುಗೊಳ್ಳಲಿವೆ. ವಿಳಂಬವಿಲ್ಲದೇ ತನಿಖೆ ಪೂರ್ಣಗೊಳಿಸಲು ಅವಕಾಶವಾಗಲಿದೆ.

‘ಬ್ಯಾಲೆಸ್ಟಿಕ್, ರಕ್ತ ಪರೀಕ್ಷೆ, ಕೆಮಿಕಲ್ ಎಕ್ಸಾಮಿನೇಶನ್ ಫೆರಾಲಜಿ ಟೆಸ್ಟ್, ಫೋರ್ಜರಿ ಪ್ರಕರಣಗಳಲ್ಲಿ ಕೈಬರಹದ ನಿಖರ ಪರೀಕ್ಷೆಗೆ ವಿಧಿ ವಿಜ್ಞಾನ ಪ್ರಯೋಗಾಲಯ ನೆರವಾಗಲಿದೆ. ಭಾರತ ಸಾಕ್ಷ್ಯ ಅಧಿನಿಯಮದಲ್ಲಿ ತಜ್ಞರು ಎಂದು ಗುರುತಿಸಿರುವುದರಿಂದ ವಿಧಿ ವಿಜ್ಞಾನ ಪ್ರಯೋಗಾಲಯ ಕೊಟ್ಟ ವರದಿಗೆ ನ್ಯಾಯಾಲಯದಲ್ಲಿ ಬಹಳಷ್ಟು ಮಹತ್ವ ಇದೆ’ ಎಂದು ಶಿವಮೊಗ್ಗ ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ ಹೇಳುತ್ತಾರೆ.

ಹುಸಿಯಾದ ನಿರೀಕ್ಷೆ

ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್, ಈಡಿಗ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಘೋಷಣೆ, ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಗೆ ಹಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು, ಶಿವಮೊಗ್ಗದಲ್ಲಿ ಹೊಸ ಕೈಗಾರಿಕಾ ನಗರ ಸ್ಥಾಪನೆ, ವಿಐಎಸ್ಎಲ್ ಹಾಗೂ ಎಂಪಿಎಂ ಪುನಃಶ್ಚೇತನಕ್ಕೆ ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ನೆರವು ಘೋಷಣೆ ಮಾಡಬಹುದು ಎಂಬ ಮಲೆನಾಡಿಗರ ನಿರೀಕ್ಷೆ ಹುಸಿಯಾಗಿದೆ.

ಹಳೆಯ ಘೋಷಣೆಗೆ ಹೊಸದಾಗಿ ಹಣ

ಕಳೆದ ಬಾರಿಯ ಬಜೆಟ್ನಲ್ಲಿ ಕಿದ್ವಾಯಿ ಸಂಸ್ಥೆಯಡಿ ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ₹ 100 ಕೋಟಿ ಘೋಷಿಸಿತ್ತು. ಅದರಲ್ಲಿ ₹ 50 ಕೋಟಿ ಬಿಡುಗಡೆ ಆಗಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ಟೆಂಡರ್ ಹಂತಕ್ಕೆ ಬಂದಿದೆ. ಆದರೆ, ಜಾಗದ ವಿವಾದದ ಕಾರಣ ಅದಕ್ಕೆ ಚಾಲನೆ ದೊರೆತಿರಲಿಲ್ಲ. ಈಗ ಸರ್ಕಾರ ಇನ್ನಷ್ಟು ಹಣ ಕೊಟ್ಟಿದೆ. ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿಯೇ ಈ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿಮ್ಸ್ನ ಆಡಳಿತಾಧಿಕಾರಿ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಡಿಕೆ ಸಂಶೋಧನೆಗೆ ನೆರವು ಸ್ವಾಗತಾರ್ಹ

ಎಲೆಚುಕ್ಕಿ ರೋಗ, ಹಳದಿ ರೋಗಗಳು ಅಡಿಕೆ ಬೆಳೆಗೆ ಶಾಪವಾಗಿ ಪರಿಣಮಿಸಿವೆ. ಈ ರೋಗಗಳ ಬಗ್ಗೆ ಸಂಶೋಧನೆ ಕೈಗೆತ್ತಿಕೊಳ್ಳಲು ಸರ್ಕಾರ ಆರ್ಥಿಕ ನೆರವು ನೀಡಿರುವುದು ಸ್ವಾಗತಾರ್ಹ ಎಂದು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿಕುಮಾರ್ ಹೇಳುತ್ತಾರೆ.

ಬೆಳೆ ನಂತರ ಬೇಸಾಯದ ಪದ್ಧತಿಗಳು, ಉತ್ಪಾದಕತೆ ಹೆಚ್ಚಳಕ್ಕೆ ತಾಂತ್ರಿಕತೆಗಳ ಸಂಶೋಧನೆಗೂ ಈ ಹಣ ಬಳಕೆಯಾಗಲಿದೆ ಎನ್ನುತ್ತಾರೆ ಅವರು.

ರೈಲ್ವೆ ಕಾಮಗಾರಿಗೆ ಬಲ

ಶಿವಮೊಗ್ಗ– ಶಿಕಾರಿಪುರ– ರಾಣೆಬೆನ್ನೂರು ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಜೆಟ್ನಲ್ಲಿ
₹ 150 ಕೋಟಿ ಕೊಟ್ಟಿದೆ. ಇದು ಕಾಮಗಾರಿಗೆ ಬಲ ತುಂಬಲಿದೆ ಎನ್ನಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರುವರಿ 27ಕ್ಕೆ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಜಿಲ್ಲೆಯಲ್ಲಿ 33 ಪೊಲೀಸ್ ಠಾಣೆಗಳಿವೆ. ಪ್ರಮುಖ ಪ್ರಕರಣಗಳಲ್ಲಿ ತ್ವರಿತವಾಗಿ ತನಿಖೆ ಕೈಗೊಳ್ಳಲು ನೆರವಾಗುವುದರಿಂದ ಇಲ್ಲಿಗೆ ವಿಧಿ–ವಿಜ್ಞಾನ ಪ್ರಯೋಗಾಲಯ ಕೊಟ್ಟಿರುವುದು ಬಹಳಷ್ಟು ಸೂಕ್ತ.

ಅನಿಲ್ಕುಮಾರ್ ಭೂಮರಡ್ಡಿ, ಎಎಸ್ಪಿ, ಶಿವಮೊಗ್ಗ

ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ₹ 500 ಸಹಾಯಧನ ಘೋಷಿಸಲಾಗಿದೆ. ಅದನ್ನು ದುಪ್ಪಟ್ಟುಗೊಳಿಸಬೇಕಿತ್ತು. ವಕೀಲರ ಆರೋಗ್ಯ ಸೌಲಭ್ಯ ಕಾರ್ಯಕ್ರಮದಡಿ ₹ 100 ಕೋಟಿ ಕಾರ್ಪಸ್ ಫಂಡ್ ರಚಿಸಲು ಸರ್ಕಾರ ಅನುಮೋದನೆ ನೀಡಿದೆ. ಇದು ಸ್ವಾಗತಾರ್ಹ.

ಸುರೇಖಾ ಪಿ.ವಿ, ವಕೀಲರು, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.