ಫೋಟೊ ವಿಚಾರದಲ್ಲಿ ಸಹೋದರರ ಜಗಳ: ಹಲ್ಲೆ
ಶಿವಮೊಗ್ಗ: ತಾಲ್ಲೂಕಿನ ಆಯನೂರು ಸಮೀಪದ ಆನೆಸರ ಚನ್ನಳ್ಳಿ ಗ್ರಾಮದಲ್ಲಿ ಬುಧವಾರ ಯುವತಿಯೊಬ್ಬಳ ಫೋಟೊ ವಿಚಾರವಾಗಿ ಸಹೋದರರ ನಡುವೆ ಗಲಾಟೆ ನಡೆದು ಪರಸ್ಪರ ಹಲ್ಲೆ ನಡೆದಿದೆ.
ರಾಮನಾಯ್ಕ ಎಂಬುವವರ ಮಗನ ಮೊಬೈಲ್‌ನಲ್ಲಿ ಈರಾನಾಯ್ಕ ಅವರ ಪುತ್ರಿಯ ಫೋಟೊ ಇದೆ ಎನ್ನುವ ವಿಚಾರಕ್ಕೆ ಈರಾನಾಯ್ಕ ಅವರು ಸಹೋದರ ರಾಮನಾಯ್ಕ ಜೊತೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆ ನಡೆದಿದೆ.
ಈರಾನಾಯ್ಕ ಹಾಗೂ ಅವರ ಪುತ್ರ ರಾಮನಾಯ್ಕ, ನಾಗನಾಯ್ಕ, ಕಿಶನ್, ಅನಿತಾ ಬಾಯಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯಿಂದಾಗಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.