ಬುಧವಾರ, ಡಿಸೆಂಬರ್ 1, 2021
26 °C

repeated ರೋಮಾಂಚನಗೊಳಿಸಿದ ಹೋರಿ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ತಾಲ್ಲೂಕಿನ ಯಲವಳ್ಳಿ ಗ್ರಾಮ ಸಲಹಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಹಬ್ಬವು ವಿಜೃಂಭಣೆಯಿಂದ ನಡೆಯಿತು.

ಯಲವಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ದೀಪಾವಳಿ ಹಬ್ಬದ ಮರು ದಿನ ಹಮ್ಮಿಕೊಳ್ಳುವ ಹೋರಿ ಬೆದರಿಸುವ ಹಬ್ಬವನ್ನು ವೀಕ್ಷಿಸಲು ತಾಲ್ಲೂಕಿನಾದ್ಯಂತ ಸಾವಿರಾರು ಜನರು ಸೇರಿದ್ದರು.

ಹೋರಿ ಬೆದರಿಸುವ ಹಬ್ಬಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೋರಿಗಳನ್ನು ಖರೀದಿಸಿದ್ದ ಮಾಲೀಕರು ತಮ್ಮ ಪ್ರಿಯವಾದ ಹೋರಿಗಳ ಕೊಂಬಿಗೆ ಆಳೆತ್ತರಕ್ಕೆ ಬಲೂನ್ ಕಟ್ಟಿ ಸಿಂಗರಿಸಿದ್ದರು. ಅಲ್ಲದೇ ಕಾಲಿಗೆ ಗೆಜ್ಜೆ, ಜೂಲಾ ಸೇರಿ ವಿವಿಧ ವಸ್ತುಗಳಿಂದ ಅಲಂಕರಿಸಿದ್ದು ಜನಸ್ತೋಮಕ್ಕೆ ಮುದ ನೀಡಿತು. ನೂರಾರು ಹೋರಿಗಳು ಅಖಾಡದಲ್ಲಿ ಓಡುತ್ತಿದ್ದಂತೆಯೇ ಅವುಗಳನ್ನು ಹಿಂಬಾಲಿಸುವ ಮಾಲೀಕರು ಹೋರಿಗಳ ಹೆಸರಿನ ಟೀ ಶರ್ಟ್ ಹಾಗೂ ಧ್ವಜವನ್ನು ಹಿಡಿದು ಸಾಗುತ್ತಿದ್ದರೆ, ಇತ್ತ ಅವರ ಹುಮ್ಮಸ್ಸಿಗೆ ಭಂಗ ತರುವಂತೆ ಹೋರಿ ಹಿಡಿಯಲು ಅಖಾಡದಲ್ಲಿ ಜಮಾಯಿಸಿದ್ದ ಯುವಕರ ಗುಂಪು ಹೋರಿಗಳ ಕೊರಳಿಗೆ ಕೈಹಾಕುವ ಪ್ರಯತ್ನ ನಡೆಸುತ್ತಿದ್ದರು.

ಯುವರಾಜ, ಹುಲಿಯಾ, ಬೆಂಕಿ ಚೆಂಡು, ಕದಂಬ, ಕರುನಾಡ ಕಂದ, ಕಿರಾತಕ, ಪೀಪಿ, ಸನಾದಿ ಅಪ್ಪಣ್ಣ, ಅಪ್ಪು, ಭಜರಂಗಿ, ಕೋಟಿಗೊಬ್ಬ, ಕುಟ್ಟಿಪುಡಿ, ಡಾನ್, ಹಂತಕ, ತಾರಾಕುಸರ, ಮನದಾಸೆ, ಯುವರತ್ನ, ಬಿಂದಾಸ್, ಗೂಳಿ ಹರೂರು, ಶಾಂತಗೇರಿ ಗೂಳಿ, ಮೇನ್ ರೂಡ್ ಮಯೂರ, ಕಬ್ಬಡ್ಡಿ ಕಿಂಗ್, ಜೈಹನುಮಾನ್ ಶ್ರೀವೀರ, ಜಮೀನ್ದಾರ್, ಹಿಂದೂ ಹುಲಿ, ಸರದಾರ್ ಎನ್ನುವ ನೂರಾರು ಹೋರಿಗಳು ಉತ್ತಮವಾಗಿ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಪ್ರೇಕ್ಷರನ್ನು ರಂಜಿಸಿದವು. ತಾಲ್ಲೂಕು ಸೇರಿ ವಿವಿಧ ಭಾಗಗಳಿಂದ ಹೋರಿ ಹಿಡಿಯಲು ಆಗಮಿಸಿದ್ದ ಯುವಕರು ಅಖಾಡದಲ್ಲಿ ಬೆದರುವ ಹೋರಿಗಳನ್ನು ಪ್ರಾಣದ ಹಂಗು ತೊರೆದು ಹಿಡಿಯುತ್ತಿದ್ದ ದೃಶ್ಯ ರೋಮಾಂಚನಗೊಳಿಸುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು