ಮಲೆನಾಡು ದಾಟಿ ಬಯಲುಸೀಮೆಗೆ ಮುನ್ನುಡಿ ಬರೆಯುವ ಶಿವಮೊಗ್ಗ ಜಿಲ್ಲೆಯ ಸೊರಬ–ಶಿಕಾರಿಪುರ ಭಾಗದಲ್ಲಿ ಕೆರೆ ಬೇಟೆ ಎಂದರೆ ವಿಶೇಷ ಹಬ್ಬವೇ ಸರಿ. ಬೇಸಿಗೆಯಲ್ಲಿ ನಡೆಯುವ ಈ ಸಂಪ್ರದಾಯಕ್ಕೆ ಸಾವಿರಾರು ಮೀನುಪ್ರಿಯರು ಸಾಕ್ಷಿಯಾಗುತ್ತಾರೆ. ದೇವಸ್ಥಾನ, ಕೆರೆ ಹಾಗೂ ಊರಿನ ಅಭಿವೃದ್ಧಿಗಾಗಿ ನಿಗದಿತ ಶುಲ್ಕ ಪಡೆದು ಕೆರೆಯಲ್ಲಿರುವ ಮೀನುಗಳನ್ನು ಹಿಡಿಯಲು ಅವಕಾಶ ನೀಡಲಾಗುತ್ತದೆ. ಮೀನು ಹೆಚ್ಚು ಸಿಕ್ಕರೆ ಲಾಭ, ಇಲ್ಲದಿದ್ದರೆ ದೇವರಿಗೆ ಭಕ್ತಿ ಸಮರ್ಪಣೆ ಎಂಬ ಭಾವನೆಯೇ ಇಲ್ಲಿ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.