ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲುಬೆ ಹಾದಿಯ 14 ಸ್ಥಳಗಳ ನಿರ್ಮಾಣ

ಸೇಕ್ರೆಡ್‌ ಹಾರ್ಟ್‌ ಚರ್ಚ್ ಆವರಣ; ಇಂದು ಉದ್ಘಾಟನೆ
Last Updated 31 ಜನವರಿ 2021, 4:21 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಸೇಕ್ರೆಡ್‌ ಹಾರ್ಟ್ ಚರ್ಚ್ ಆವರಣದಲ್ಲಿ ಶಿಲುಬೆ ಹಾದಿಯ 14 ಸ್ಥಳಗಳನ್ನುವಿಶಿಷ್ಟ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಎರಡು ವರ್ಷಗಳ ಹಿಂದೆ ಚರ್ಚ್‌ ಮಹಾದ್ವಾರದಲ್ಲಿ ಯೇಸುಕಿಸ್ತನ ಬೃಹತ್ ಶಿಲ್ಪವನ್ನು ಅನಾವರಣಗೊಳಿಸಲಾಗಿದ್ದು, ಚರ್ಚ್‌ ಸೌಂದರ್ಯವನ್ನು ಹೆಚ್ಚಿಸಿದೆ. ಶಿವಮೊಗ್ಗದ ಪ್ರವಾಸಿ ತಾಣವಾಗಿ ಸೇಕ್ರೆಡ್ ಹಾರ್ಟ್ ಚರ್ಚ್ ಗುರುತಿಸಿಕೊಂಡಿದೆ.

ಜೆರುಸಲೇಂನ ಅಂದಿನ ಅರಸ ಪಿಲಾತನು ಯೇಸುಕ್ರಿಸ್ತನಿಗೆ ಮರಣ ದಂಡನೆ ವಿಧಿಸಿದ ನಂತರ ಯೇಸುಕ್ರಿಸ್ತನ ಜೀವನದ ಅಂತಿಮ ಪ್ರಯಾಣವು ಅರಂಭವಾಗುತ್ತದೆ. ಪಿಲಾತನ ಅರಮನೆಯಿಂದ ಕಲ್ವಾರಿ ಬೆಟ್ಟದವರೆಗೆ ಸಾಗಿದ ವಿವಿಧ ಘಟನೆಗಳನ್ನು ಶಿಲಬೆಯ ಹಾದಿಯಲ್ಲಿ ನಿರ್ಮಿಸಲಾಗಿದೆ.

ಇಂದು ಉದ್ಘಾಟನೆ: ಭದ್ರಾವತಿಯ ಧರ್ಮಾಧ್ಯಕ್ಷ ಡಾ.ಜೋಸೆಫ್ ಅರುಮಚಡತ್ ಅವರು ಶಿಲುಬೆ ಹಾದಿಯ 14 ಸ್ಥಳಗಳನ್ನು ಜನವರಿ 31ರಂದು ಸಂಜೆ 5.45ಕ್ಕೆ ಉದ್ಘಾಟಿಸುವರು. ನಂತರ ಸಹಗುರುಗಳೊಂದಿಗೆ ಬಲಿಪೂಜೆ ನಡೆಸಲಾಗುವುದು ಎಂದು ಚರ್ಚ್‌ನ ಪ್ರಧಾನ ಗುರು ಫಾದರ್ ಗಿಲ್ಬರ್ಟ್ ಲೋಬೋ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT