ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಲ್ಟಿಫ್ಲೆಕ್ಸ್‌ನಲ್ಲಿ ಇಂದಿನಿಂದ ಪ್ರದರ್ಶನ

ಸದ್ಯಕ್ಕೆ ಬಾಗಿಲು ತೆರೆಯದಿರಲು ಚಿತ್ರಮಂದಿರಗಳ ಮಾಲೀಕರ ನಿರ್ಧಾರ
Last Updated 14 ಅಕ್ಟೋಬರ್ 2020, 18:11 IST
ಅಕ್ಷರ ಗಾತ್ರ

ಶಿವಮೊಗ್ಗ:ಸರ್ಕಾರ ಅ.15ರಿಂದ ಪ್ರದರ್ಶನಕ್ಕೆ ಅನುಮತಿ ನೀಡಿದರೂ ಜಿಲ್ಲೆಯಲ್ಲಿ ಸದ್ಯಕ್ಕೆಚಿತ್ರಮಂದಿರಗಳನ್ನು ತೆರೆಯಲು ಮಾಲೀಕರು ಮನಸ್ಸು ಮಾಡಿಲ್ಲ. ಶಿವಪ್ಪ ನಾಯಕ ಮಾರುಕಟ್ಟೆಯ ಮಲ್ಟಿಫ್ಲೆಕ್ಸ್‌ನಲ್ಲಿಪ್ರದರ್ಶನ ಆರಂಭವಾಗುತ್ತಿದೆ.

ಶಿವಪ್ಪ ನಾಯಕ ಮಾರುಕಟ್ಟೆಯ ಭಾರತ್ ಸಿನಿಮಾಸ್‌ನಲ್ಲಿ ನಾಲ್ಕು ಪರದೆಗಳಿವೆ. ಪ್ರತಿ ಪರದೆಯಲ್ಲೂ ತಲಾ ಎರಡು ಪ್ರದರ್ಶನ ಇರುತ್ತದೆ. ಗುರುವಾರ ಬೆಳಿಗ್ಗೆ 11ರಿಂದ ರಾತ್ರಿ 8ರ ಮಧ್ಯೆ ಎರಡು ಪ್ರದರ್ಶನಗಳಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ತಲಾ ಒಂದು ಚಿತ್ರಗಳು, ಕನ್ನಡದ ಲವ್‌ ಮಾಕ್‌ಟೆಲ್‌, ಶಿವಾಜಿ ಸೂರತ್ಕಲ್‌ ಚಿತ್ರಗಳನ್ನು ಮರು ಪ್ರದರ್ಶನ ಮಾಡಲಾಗುತ್ತಿದೆ.

ಪ್ರದರ್ಶನದ ನಂತರ ಮೂರು ತಾಸು ಬಂದ್:

ಒಂದು ಪ್ರದರ್ಶನದ ನಂತರ ಮೂರು ತಾಸು ಚಿತ್ರ ಪ್ರದರ್ಶನ ಇರುವುದಿಲ್ಲ. ಆ ಅವಧಿಯಲ್ಲಿ ಸ್ಯಾನಿಟೈಸಿಂಗ್ ಮಾಡಲಾಗುತ್ತದೆ. ಮತ್ತೆ ಪ್ರದರ್ಶನ ಆರಂಭಿಸಲಾಗುತ್ತದೆ. ಒಳಗೆ ಹೋಗುವ ಪ್ರೇಕ್ಷಕರಿಗೆ ಸ್ವಯಂ ಚಾಲಿತ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸಿಂಗ್ ವ್ಯವಸ್ಥೆ ಮಾಡಲಾಗಿದೆ. ಒಂದು ಆಸನ ಮತ್ತು ಮತ್ತೊಂದು ಆಸನದ ಮಧ್ಯೆ ಒಂದು ಕುರ್ಚಿ ಖಾಲಿ ಬಿಡಲಾಗಿದೆ.

ದರದಲ್ಲೂ ರಿಯಾಯಿತಿ: ಮಲ್ಟಿಫ್ಲೆಕ್ಸ್‌ನ ಟಿಕೆಟ್ ದರ ₹ 150 ಹಾಗೂ ₹ 200 ಇತ್ತು. ಕೋವಿಡ್‌ ಸಂಕಷ್ಟದ ಕಾಲದಲ್ಲಿ ಪ್ರೇಕ್ಷರನ್ನು ಚಿತ್ರಮಂದಿರದ ಒಳಗೆ ಸೆಳೆಯಲು ದರದಲ್ಲೂ ಕಡಿತ ಮಾಡಲಾಗಿದೆ. ಎಲ್ಲ ಬಗೆಯ ಆಸನಗಳಿಗೂ ₹ 100 ದರ ನಿಗದಿ ಮಾಡಲಾಗಿದೆ.

ಚಿತ್ರಮಂದಿರಗಳಿಗಿಲ್ಲ ಸದ್ಯ ಪ್ರವೇಶ:

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 20 ಚಿತ್ರಮಂದಿರಗಳಿವೆ.ಸದ್ಯಕ್ಕೆ ಪ್ರದರ್ಶನಕ್ಕೆ ಸಿದ್ಧವಾಗಿಲ್ಲ. ಹೊಸ ಚಿತ್ರಗಳು ಬಿಡುಗಡೆಯಾಗದೇ ಇರುವುದು. ಸದ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದು ಅನುಮಾನ ಎಂಬುದು ಅವರ ಅನಿಸಿಕೆ. ಅಲ್ಲದೇ, ಬ್ಯಾಂಕ್ ಸಾಲ, ವಿದ್ಯುತ್ ಬಿಲ್‌ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಚಿತ್ರಮಂದಿರಗಳ ಮಾಲೀಕರು ಮನವಿ ಸಲ್ಲಿಸಿದ್ದಾರೆ. ಸರ್ಕಾರದ ನಿರ್ಧಾರ ನೋಡಿಕೊಂಡು ಅ.23 ಅಥವಾ ನ.1ರಿಂದ ಪ್ರದರ್ಶನ ಆರಂಭಿಸಲು ಚಿಂತನೆ ನಡೆಸಿದ್ದಾರೆ.

‘ಪ್ರದರ್ಶನ ಆರಂಭ ಕುರಿತುಇದುವರೆಗೂ ಸಂಘದ ಮುಖಂಡರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬಹುತೇಕ ಮಾಲೀಕರು ಕೋವಿಡ್‌ ನಂತರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸರ್ಕಾರದಸ್ಪಂದನೆನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಕನ್ನಡ ರಾಜ್ಯೋತ್ಸವ ದಿನದಿಂದ ಆರಂಭಿಸುವ ನಿರೀಕ್ಷೆ ಇದೆ’ ಎನ್ನುವುದು ಮಲ್ಲಿಕಾರ್ಜುನ ಚಿತ್ರಮಂದಿರದ ಮಾಲೀಕ ಶೈಲೇಶ್ ಪ್ರತಿಕ್ರಿಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT