ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಸೀಮಿತರಲ್ಲ: ಚಂದ್ರಭೂಪಾಲ್

Published : 10 ಸೆಪ್ಟೆಂಬರ್ 2024, 13:49 IST
Last Updated : 10 ಸೆಪ್ಟೆಂಬರ್ 2024, 13:49 IST
ಫಾಲೋ ಮಾಡಿ
Comments

ಶಿಕಾರಿಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ಮಾತ್ರ ಸೀಮಿತ ನಾಯಕರಲ್ಲ. ಎಲ್ಲಾ ವರ್ಗದವರಿಗೂ ನಾಯಕರು ಎಂದು ಅಹಿಂದ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಭೂಪಾಲ್ ತಿಳಿಸಿದರು.

ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಜನಾಂಗದವರ ಕಷ್ಟಕ್ಕೆ ಸ್ಪಂದಿಸಿದ್ದು, ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅಹಿಂದ ವರ್ಗಗಳ ಸಂಪೂರ್ಣ ಬೆಂಬಲ ಅವರಿಗೆ ಇದೆ. ಅಹಿಂದ ಸಂಘಟನೆ ಮುಂದುವರಿದ ಜಾತಿಗಳ ವಿರುದ್ಧವಾದ ಸಂಘಟನೆ ಅಲ್ಲ. ಸರ್ಕಾರ ಜಾತಿ ಜನಗಣತಿ ವರದಿಯನ್ನು ಬಹಿರಂಗಪಡಿಸಬೇಕು ಎಂದು ಪಟ್ಟಣದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಬಂಗಾರಪ್ಪ ಅವರ ನಂತರ ಅಹಿಂದ ನಾಯಕತ್ವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ತುಂಬಿದ್ದಾರೆ. ಅಹಿಂದ ವರ್ಗಗಳು ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸದೃಢರಾಗಬೇಕು’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಪಾರಿವಾಳ ಶಿವರಾಮ್, ಕಣಿವೆಮನೆ ಅರುಣ್ ಕುಮಾರ್, ಭಂಡಾರಿ ಮಾಲತೇಶ್, ಸ.ನ. ಮಂಜಪ್ಪ, ಅಹಿಂದ ಯುವ ಘಟಕದ ತಾಲ್ಲೂಕು ಅಧ್ಯಕ್ಷ ನಗರದ ಮಾಲತೇಶ್, ಪದಾಧಿಕಾರಿಗಳಾದ ಲೋಕೇಶ್, ದುರ್ಗೇಶ್, ಶಫಿವುಲ್ಲಾ, ಪ್ರಶಾಂತ್, ಮಕ್ಬೂಲ್, ಮುಕ್ತಾರ್, ವಸಂತಕುಮಾರ್, ಸುನಿಲ್ ಬನ್ನೂರು, ನಗರದ ರವೀಂದ್ರಕುಮಾರ್ ಕಿಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT