ಶಿವಮೊಗ್ಗ: ತುರ್ತು ಸೇವೆ ಹೊರತಾಗಿ ವಾಣಿಜ್ಯ ಬಳಕೆಗೆ ಎಲ್ಪಿಜಿ ಸಿಲಿಂಡರ್ ಪೂರೈಕೆ ಶಿವಮೊಗ್ಗ ಜಿಲ್ಲೆಗೆ ಮಂಗಳವಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಹೋಟೆಲ್, ಬೇಕರಿ, ಕೆಟರಿಂಗ್ ಹಾಗೂ ಪಿ.ಜಿ (ಪೇಯಿಂಗ್ ಗೆಸ್ಟ್) ಸೇರಿದಂತೆ ಆಹಾರೋದ್ಯಮ ಸಂಕಷ್ಟಕ್ಕೀಡಾಗಿದೆ.

‘ಆಸ್ಪತ್ರೆ, ಹಾಸ್ಟೆಲ್ಗಳಿಗೆ, ರೈಲ್ವೆ, ರಕ್ಷಣಾ ಪಡೆಯಂತಹ ತುರ್ತು ಸೇವೆ ಹೊರತಾಗಿ ಉಳಿದ ಉದ್ದೇಶಕ್ಕೆ ವಾಣಿಜ್ಯ ಸಿಲಿಂಡರ್ ಪೂರೈಕೆ ಸದ್ಯ ಸ್ಥಗಿತಗೊಂಡಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ’ ಎಂದು ಶಿವಮೊಗ್ಗ ಜಿಲ್ಲಾ ಉಜ್ವಲಾ ಯೋಜನೆಯ ನೋಡಲ್ ಅಧಿಕಾರಿ ಸೂರ್ಯಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶಿವಮೊಗ್ಗ ಜಿಲ್ಲೆಗೆ ಸದ್ಯ ಸರ್ಕಾರಿ ಸ್ವಾಮ್ಯದ ಎಚ್ಪಿಸಿಎಲ್, ಬಿಪಿಸಿಎಲ್ ಹಾಗೂ ಐಒಸಿಎಲ್ ಸಂಸ್ಥೆಗಳು ಎಲ್ಪಿಜಿ ಸಿಲಿಂಡರ್ ಪೂರೈಕೆ ಮಾಡುತ್ತಿವೆ. ಎಚ್ಪಿಸಿಎಲ್ ಹಾಗೂ ಬಿಪಿಸಿಎಲ್ ಸಂಸ್ಥೆಗಳು ಮಂಗಳೂರಿನಿಂದ ಪೂರೈಕೆ ಮಾಡುತ್ತಿದ್ದರೆ, ಐಒಸಿಎಲ್ ಶಿವಮೊಗ್ಗದ ಕೈಗಾರಿಕಾ ಪ್ರದೇಶದಲ್ಲಿ ತನ್ನ ಪ್ಲಾಂಟ್ ಹೊಂದಿದೆ. ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಗೆ ಬಿಪಿಸಿಎಲ್ ಹಾಗೂ ಎಚ್ಪಿಸಿಎಲ್ ಮಾತ್ರ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡುತ್ತಿವೆ.

‘ಎಚ್ಪಿಸಿಎಲ್ ಸಂಸ್ಥೆ ಜಿಲ್ಲೆಯಲ್ಲಿ ವಿತರಕರ ಮೂಲಕ ನಿತ್ಯ 250 ವಾಣಿಜ್ಯ ಸಿಲಿಂಡರ್ ಹಾಗೂ 4,500 ಗೃಹ ಬಳಕೆ ಸಿಲಿಂಡರ್ಗಳನ್ನು ಗ್ರಾಹಕರಿಗೆ ಪೂರೈಕೆ ಮಾಡುತ್ತಿದೆ. ಬಿಪಿಸಿಎಲ್ ಪ್ರತಿನಿಧಿ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

‘ಐಒಸಿಎಲ್ನಿಂದ ನಿತ್ಯ 100 ವಾಣಿಜ್ಯ ಸಿಲಿಂಡರ್ ಹಾಗೂ 5,000 ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆ ಮಾಡಲಾಗುತ್ತಿದೆ. ಸದ್ಯ ಗೃಹ ಬಳಕೆ ಉದ್ದೇಶದ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ಆದಿಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಗೃಹ ಬಳಕೆಗೆ ಪೂರೈಕೆ ಅಬಾಧಿತ:

ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಗೆ ಅಡಚಣೆಯಾದರೂ ಗೃಹ ಬಳಕೆ ಸಿಲಿಂಡರ್ ಪೂರೈಕೆ ಮಾತ್ರ ಅಬಾಧಿತವಾಗಿದೆ. ಸದ್ಯ ಅದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯ 21,229 ಸೇರಿದಂತೆ ಒಟ್ಟು 2,05,411 ಗೃಹ ಬಳಕೆ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗಿದೆ.

ಅಕ್ಷರದಾಸೋಹ ಅಡಿ ಶಾಲೆಗಳಲ್ಲಿ ಗೃಹ ಬಳಕೆಯ ಸಿಲಿಂಡರ್ಗಳ ಬಳಕೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಇನ್ನೂ ಒಂದು ತಿಂಗಳಿಗೆ ಆಗುವಷ್ಟು ಸಿಲಿಂಡರ್ಗಳ ದಾಸ್ತಾನು ಇದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಡಿಡಿಪಿಐ ಎಸ್.ಆರ್.ಮಂಜುನಾಥ್ ತಿಳಿಸಿದರು.

ಗೃಹ ಬಳಕೆಯದ್ದು ಯಾವುದೂ ಸಮಸ್ಯೆ ಇಲ್ಲ. ವಾಣಿಜ್ಯ ಬಳಕೆಯಲ್ಲಿ ಶಾಲೆ ಹಾಸ್ಟೆಲ್ ಆಸ್ಪತ್ರೆಗಳ ಬೇಡಿಕೆ ಹೊರತಾಗಿ ಉಳಿದ ಕಡೆಗೆ ಫೂರೈಕೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಪ್ರಭುಲಿಂಗ ಕವಳಿಕಟ್ಟಿ ಶಿವಮೊಗ್ಗ ಜಿಲ್ಲಾಧಿಕಾರಿ

ಹೋಟೆಲ್ ಮಾಲೀಕರ ಸಂಘದ ಸಭೆ ಇಂದು ‘

ಸ್ಟಾಕ್ ಉಳಿದಿರುವ ಸಿಲಿಂಡರ್ಗಳನ್ನು ಸದ್ಯ ಡೀಲರ್ಗಳು ನಮಗೆ ಕೊಡುತ್ತಿದ್ದಾರೆ. ಪೂರೈಕೆ ಯಾವಾಗ ನಿಲ್ಲಿಸುತ್ತಾರೊ ಗೊತ್ತಿಲ್ಲ. ನಾವೂ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದೇವೆ. ಆ ಬಗ್ಗೆ ಚರ್ಚಿಸಲು ಬುಧವಾರ ಸಂಘದ ತುರ್ತು ಸಭೆ ಕರೆದಿದ್ದೇವೆ. ಅಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎಂ. ಗೋಪಿನಾಥ್ ಹೇಳುತ್ತಾರೆ. ‘ನಾಲ್ಕೈದು ದಿನ ವಾರದ ನಂತರವೂ ಯುದ್ಧ ಮುಂದುವರೆಯುತ್ತದೆ ಅಂದರೆ ಹೋಟೆಲ್ಗಳನ್ನು ಸಂಪೂರ್ಣ ಮುಚ್ಚುವುದೋ ಇಲ್ಲವೇ ಎಲೆಕ್ಟ್ರಿಕ್ ಸ್ಟೋವ್ ಬಳಸಿ ಗ್ರಾಹಕರಿಗೆ ಕನಿಷ್ಠ ಪ್ರಮಾಣದಲ್ಲಿ ಆಹಾರ ಪೂರೈಕೆ ಮಾಡಬಹುದೇ ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ’ ಎನ್ನುತ್ತಾರೆ. ‘ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಶಿವಮೊಗ್ಗ ನಗರವೊಂದರಲ್ಲೇ ಹೋಟೆಲ್ ಕೆಟರಿಂಗ್ ಬೇಕರಿ ಸೇರಿ 600ಕ್ಕೂ ಹೆಚ್ಚು ಆಹಾರ ಸಂಬಂಧಿ ಉದ್ಯಮಗಳು ಸಂಕಷ್ಟಕ್ಕೆ ಒಳಗಾಗಲಿವೆ’ ಎಂದರು.

ಫೋನ್ ಎತ್ತುವುದು ನಿಲ್ಲಿಸಿದ್ದೇವೆ..

‘ಗ್ರಾಮೀಣ ಭಾಗದಲ್ಲಿ ಗೃಹ ಬಳಕೆ ಸಿಲಿಂಡರ್ ವಿತರಣೆಗೆ ಈಗ ಒಟಿಪಿ ಕಡ್ಡಾಯಗೊಳಿಸಿದ್ದಾರೆ. ಪೂರೈಕೆ ಕಡಿಮೆ ಆಗಿದೆ. ತಿಂಗಳಿಗೊಂದು ಬುಕ್ ಮಾಡಿದರೆ ಮಾತ್ರ ತೆಗೆದುಕೊಳ್ಳುತ್ತಾರೆ. ದಿನಕ್ಕೆ 15ರಿಂದ 20 ಸಿಲಿಂಡರ್ ಪೂರೈಕೆ ಮಾಡುತ್ತಿದ್ದರು. ಇವತ್ತು ಬರೀ ಆರು ಸಿಲಿಂಡರ್ ಕೊಟ್ಟಿದ್ದಾರೆ. ಗ್ರಾಹಕರಿಗೆ ಉತ್ತರ ಹೇಳುವುದು ಕಷ್ಟವಾಗಿದೆ. ಹೀಗಾಗಿ ಯಾರಾದರೂ ಕರೆ ಮಾಡಿದರೆ ಸ್ವೀಕರಿಸುವುದು ಬಿಟ್ಟಿದ್ದೇನೆ’ ಎಂದು ಜಿಲ್ಲೆಯ ಎಲ್ಪಿಜಿ ಸಬ್ ಡೀಲರ್ ಒಬ್ಬರು ಹಳ್ಳಿಗಳಲ್ಲಿನ ವಾಸ್ತವ ಸ್ಥಿತಿ ಬಿಚ್ಚಿಟ್ಟರು. ಸಿಮ್ಸ್ ಹಾಸ್ಟೆಲ್ನಲ್ಲೂ ಆತಂಕ: ‘ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿ ಎರಡು ದಿನಕ್ಕೆ ಬೇಕಾದ ನಾಲ್ಕು ವಾಣಿಜ್ಯ ಸಿಲಿಂಡರ್ ಮಾತ್ರ ದಾಸ್ತಾನು ಇವೆ. ಚಪಾತಿ ಮಾಡದೇ ಬರೀ ಅನ್ನ ಸಾಂಬಾರ್ ಮಾಡಿದರೆ ಮಾತ್ರ ಆ ಸಿಲಿಂಡರ್ ಎರಡು ದಿನ ಬಳಕೆಗೆ ಅವಕಾಶವಾಗಲಿದೆ. ನಂತರ ಏನು ಮಾಡುವುದೋ ಗೊತ್ತಿಲ್ಲ’ ಎಂದು ಹಾಸ್ಟೆಲ್ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

ತುರ್ತು ಸಂದರ್ಭ ಪರಸ್ಪರ ವಿನಿಮಯ; ಕೇಂದ್ರ ಸೂಚನೆ

ಪೂರೈಕೆಯಲ್ಲಿನ ವ್ಯತ್ಯಯ ತಪ್ಪಿಸಲು ಎಲ್ಪಿಜಿ ಪೂರೈಸುವ ಎಲ್ಲ ಕಂಪನಿಗಳು ತಮ್ಮಲ್ಲಿ ಸಂಗ್ರಹ ಇರುವ ಸಿಲಿಂಡರ್ಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ತುರ್ತು ಅಗತ್ಯದ ವೇಳೆ ಗ್ರಾಹಕರಿಗೆ ವಿತರಣೆ ಮಾಡುವಂತೆ ಕೇಂದ್ರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಸೋಮವಾರ ಸುತ್ತೋಲೆ ಹೊರಡಿಸಿದೆ. ಗ್ರಾಹಕ ಯಾವ ಕಂಪನಿಯಿಂದ ಸೇವೆ ಪಡೆಯುತ್ತಿದ್ದಾನೆ ಎಂಬುದನ್ನು ನೋಡದೇ ನಿಮ್ಮ ಬಳಿ ದಾಸ್ತಾನು ಇದ್ದಲ್ಲಿ ತುರ್ತು ಸಂದರ್ಭದಲ್ಲಿ ಪೂರೈಕೆ ಮಾಡುವಂತೆ ಇಲ್ಲವೇ ಸಂಬಂಧಿಸಿದ ಕಂಪನಿಯೊಂದಿಗೆ ದಾಸ್ತಾನು ಹಂಚಿಕೊಳ್ಳುವಂತೆ ಬಿಪಿಸಿಎಲ್ ಎಚ್ಪಿಸಿಎಲ್ ಹಾಗೂ ಐಒಸಿಎಲ್ ಕಂಪನಿಗಳಿಗೆ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.