ಶನಿವಾರ, ಅಕ್ಟೋಬರ್ 1, 2022
23 °C

ರಾಷ್ಟ್ರದ್ರೋಹಿಗಳ ಕೈಯಲ್ಲಿ ಕಾಂಗ್ರೆಸ್‌: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ‘ದೇಶದ ಯಾವುದೇ ಜಾಗವನ್ನು ಮುಸಲ್ಮಾನರಿಗೆ ಅಂತ ಕೊಟ್ಟಿಲ್ಲ, ಶಿವಮೊಗ್ಗದಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವ ಜಾಗದಲ್ಲಿ ಸಾವರ್ಕರ್ ಫ್ಲೆಕ್ಸ್ ಏಕೆ ಹಾಕಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿರುವುದು ರಾಷ್ಟ್ರದ್ರೋಹಿಗಳ ಕೈಯಲ್ಲಿ ಕಾಂಗ್ರೆಸ್ ಇದೆ ಎಂಬುದನ್ನು ಸಾರಿದೆ’ ಶಾಸಕ ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಹಲ್ಲೆಗೆ ಒಳಗಾದ ಸುನಿಲ್‌ ಅವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಪತ್ರಕರ್ತರ ಜತೆ ಮಾತನಾಡಿ, ‘ರಾಷ್ಟ್ರದ್ರೋಹದ ಮಾತನ್ನಾಡಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸುವಂತೆ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಆಗ್ರಹಿಸುತ್ತೇನೆ’ ಎಂದು ಹೇಳಿದರು.

‌‘ಶಿವಮೊಗ್ಗದ ಮಾಲ್‌ನಲ್ಲಿ ಸಾವರ್ಕರ್ ಭಾವಚಿತ್ರ ತೆರವು ಮಾಡಿಸಿದ ವ್ಯಕ್ತಿ ಎಸ್.ಡಿ.ಪಿ.ಐ ಸಂಘಟನೆಗೆ ಸೇರಿದವರಾಗಿದ್ದು, ಈತನ ಪತ್ನಿ ಕಾಂಗ್ರೆಸ್‌ನ ಪಾಲಿಕೆ ಸದಸ್ಯೆ. ಇದರಿಂದಾಗಿ ಈ ಘಟನೆಗೆ ಕಾಂಗ್ರೆಸ್‌ ನೇರವಾಗಿ ಕಾರಣ ಎಂಬುದು ಸಾಬೀತಾಗಿದೆ. ಇದನ್ನು ಅರಿತಿರುವ ಪಕ್ಷದ ಯಾವೊಬ್ಬ ನಾಯಕರು ಇಲ್ಲಿ ತನಕ ಖಂಡನೆ ಮಾಡದಿರುವುದು ಅವರ ಪುಷ್ಟೀಕರಣ ನೀತಿಗೆ ಹಿಡಿದ ಕೈಗನ್ನಡಿ’ ಎಂದು ಟೀಕಿಸಿದರು.

‘ಎಲ್ಲಾ ಘಟನೆಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಸ್ಪಷ್ಟವಾಗಿದೆ ಕೇ‌ವಲ ಮತಬ್ಯಾಂಕ್ ಗಳಿಕೆಗೆ ರಾಜಕಾರಣ ನಡೆಸಿರುವ ಆ ಪಕ್ಷದ ಮುಖಂಡರು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಕೆ.ಇ. ಕಾಂತೇಶ್, ಬಿ.ಕೆ. ಶ್ರೀನಾಥ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು