ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ಭವಿಷ್ಯ ಅತಂತ್ರ; ಆಕ್ರೋಶ

ಅಗ್ನಿಪಥ ಯೋಜನೆ ವಿರೋಧಿಸಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಧರಣಿ
Last Updated 28 ಜೂನ್ 2022, 5:10 IST
ಅಕ್ಷರ ಗಾತ್ರ

ಶಿವಮೊಗ್ಗ: ಅಗ್ನಿಪಥ ಯೋಜನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದ ಶಿವಪ್ಪನಾಯಕ ಪ್ರತಿಮೆ ಬಳಿ ಧರಣಿ ನಡೆಸಲಾಯಿತು.

ಅಗ್ನಿಪಥ ಯೋಜನೆಯಡಿ ಸೇನೆಗೆ ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಸೇನಾ ಆಕಾಂಕ್ಷಿಗಳಾದ ಯುವಕರು ಅಸಮಾಧಾನಗೊಂಡು ಈ ಯೋಜನೆ ವಿರೋಧಿಸಿ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರನ್ನು ಬೆಂಬಲಿಸಿ ಈ ಯೋಜನೆ ಹಿಂಪಡೆಯಬೇಕೆಂದು ಧರಣಿ ನಿರತರು ಆಗ್ರಹಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲಾಗದೆ ಯುವಕರನ್ನು ಅದರಲ್ಲೂ ಸೇನಾ ಆಕಾಂಕ್ಷಿಗಳನ್ನು ಬೀದಿಗೆ ತಂದು ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಈ ಯೋಜನೆ ದೇಶದ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಮಾರಕವಾಗಿದೆ. ಹೀಗಾಗಿ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ರಮೇಶ್ ಶಂಕರಘಟ್ಟ, ಎಸ್.ಕೃಷ್ಣ, ಕೆ.ದೇವೇಂದ್ರಪ್ಪ, ಇಸ್ಮಾಯಿಲ್ ಖಾನ್, ಕೃಷ್ಣಪ್ಪ, ವಿಜಯಲಕ್ಷ್ಮೀ ಪಾಟೀಲ್, ಎಲ್. ರಾಮೇಗೌಡ, ಇಕ್ಕೇರಿ ರಮೇಶ್, ಸ್ಟೆಲ್ಲಾ ಮಾರ್ಟಿನ್, ಪ್ರೇಮಾ, ನಾಜೀಮಾ, ಜಿ.ಡಿ.ಮಂಜುನಾಥ್, ಸೈಯದ್ ವಾಹಿದ್ ಅಡ್ಡು, ಆರೀಫ್, ಚಂದ್ರಕಲಾ, ಸುವರ್ಣ ನಾಗರಾಜ್, ಶೋಭಾ, ಇಕ್ಬಲ್ ನೇತಾಜಿ, ಚಂದ್ರಶೇಖರ್, ಸಿ.ಎಸ್.ಚಂದ್ರಭೂಪಾಲ, ಚಂದನ್, ಎನ್.ಡಿ.ಪ್ರವೀಣ್ ಇದ್ದರು.

ಶಿಕಾರಿಪುರದಲ್ಲೂ ಪ್ರತಿಭಟನೆ
ಶಿಕಾರಿಪುರ:
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಮುಖಂಡರಾದ ಗೋಣಿ ಮಾಲತೇಶ್, ಎಸ್.ಪಿ.ನಾಗರಾಜಗೌಡ್ರು, ಶಿವ್ಯಾನಾಯ್ಕ, ಭಂಡಾರಿ ಮಾಲತೇಶ್, ಬೆಂಡೆಕಟ್ಟೆ ನಾಗಪ್ಪ, ಕೋಡಿಹಳ್ಳಿ ಉಮೇಶ್, ಉಮೇಶ್ ಮಾರವಳ್ಳಿ, ಕಮಲ್ಲಮ್ಮ ಹುಲ್ಮಾರ್, ಶಂಕುತಲಮ್ಮ ಶಿವಪ್ಪ, ರಾಘುನಾಯ್ಕ, ವೀರೇಶ್ ಜೋಗಿಹಳ್ಳಿ, ಜೀನಳ್ಳಿದೊಡ್ಡಪ್ಪ, ಮಯೂರ್ ದರ್ಶನ್, ಮಲ್ಲಿಕಾನಾಯ್ಕ, ಗಜೇಂದ್ರ, ಬನ್ನೂರು ಚರಣ್, ಪುನೀತ್ ನಾಯ್ಕ ಉಪಸ್ಥಿತರಿದ್ದರು.

ಉದ್ಯೋಗ ಭದ್ರತೆ ಇಲ್ಲದೆ ಅತಂತ್ರ
ಸೊರಬ:
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಅಗ್ನಿಪಥ ಯೋಜನೆ ಯುವಕರಿಗೆ ಉದ್ಯೋಗ ಭದ್ರತೆ ಇಲ್ಲದೆ ಅತಂತ್ರರನ್ನಾಗಿಸುವ ಜೊತೆಗೆ ದೇಶದ ಭದ್ರತೆಗೆ ಅಪಾಯ ತರಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ದೂರಿದರು.

ಅಗ್ನಿಪಥ ಯೋಜನೆ ವಿರೋಧಿಸಿ ತಾಲ್ಲೂಕು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಆರ್.ಸಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿರೇಶ್ ಕೊಟಗಿ, ತಾರಾ, ಮುಖಂಡರಾದ ಚಂದ್ರಶೇಖರ ಚೌಟಿ, ಕೆ.ವಿ.ಗೌಡ, ಕೆ.ಮಂಜುನಾಥ್, ಗಣಪತಿ, ಪ್ರದೀಪಕುಮಾರ್, ನಾಗರಾಜ್ ಚಂದ್ರಗುತ್ತಿ, ಸುಜಾತಾ, ಫಯಾಜ್, ಎಂ.ಡಿ.ಶೇಖರ್, ಮೆಹಬೂಬ್, ಪ್ರಭಾಕರ್ ಶಿಗ್ಗಾ, ಮಂಜುನಾಥ್ ತಲಗಡ್ಡೆ, ಸಂಜೀವ್ ತರಕಾರಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT