ಶುಕ್ರವಾರ, ಏಪ್ರಿಲ್ 16, 2021
31 °C

ಜನಾಕ್ರೋಶ ಸಮಾವೇಶ: ರಾಜ್ಯದ ಎಲ್ಲ ಠಾಣೆಗಳಿಗೂ ಕಾಂಗ್ರೆಸ್ ಮುತ್ತಿಗೆ -ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯದ ಕಾರ್ಯಕರ್ತರು ಮುಖಂಡರ ಮೇಲೆ ಭದ್ರಾವತಿಯಲ್ಲಿ ನಡೆದಂತಹ ಪೊಲೀಸ್‌ ದೌರ್ಜನ್ಯ ಮುಂದುವರಿದರೆ ರಾಜ್ಯದ ಎಲ್ಲ ಠಾಣೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.

ನಗರದ ಬಿ.ಎಚ್‌.ರಸ್ತೆಯ ಸೈನ್ಸ್‌ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ಚಲೋ–ಜನಾಕ್ರೋಶ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

’ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋಟಿಗಟ್ಟಲೆ ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿದರು. ಲೂಟಿ‌ ಹೊಡೆದು ಆಸ್ತಿ ಮಾಡಿದರು. ಹಾಗಂತ ಅವರೇ ಪೊಲೀಸರಿಗೆ ಸಂಬಳ ಕೊಡುತ್ತಾರಾ? ಸರ್ಕಾರದ ಸಂಬಳ ಪಡೆದವರಿಗೆ ನಾಚಿಕೆಯಾಗಬೇಕು. ಯಡಿಯೂರಪ್ಪ, ಈಶ್ವರಪ್ಪ ಅಥವಾ ಬಿಜೆಪಿ‌ ಕಚೇರಿಯಿಂದ ವೇತನ ನೀಡುವುದಿಲ್ಲ. ಮಾನ, ಮರ್ಯಾದೆ ಇದ್ದವರು ಇಂತಹ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಐಪಿಸಿ ಕಲಂಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದರೆ ಯಾವ ಪೊಲೀಸರೂ ತಡೆಯಲು ಸಾಧ್ಯವಿಲ್ಲ. ಸುಳ್ಳು ಕೇಸ್ ಹಾಕ್ತೀರಾ? ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬೀಕೇರ್ ಫುಲ್’ ಎಂದು ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೊನಾ ಸಮಯದಲ್ಲೂ ಸರ್ಕಾರ ಜನರಿಗೆ ಉಪಕಾರ ಮಾಡಲಿಲ್ಲ. ಹಾಸಿಗೆ, ದಿಂಬಿನಲ್ಲೇ ಸಾವಿರಾರು ಕೋಟಿ‌ ಲೂಟಿ ಹೊಡೆದರು. ಅವರ ಮಾತು ಹೇಳದವರನ್ನು ಐಟಿ, ಸಿಬಿಐ, ಇಡಿ ಬಿಟ್ಟು ಹೆದರಿಸಿದರು. ತಮ್ಮನ್ನು ಸಿಗಿಸಲು‌ ಸಂಚು ಮಾಡಿದರು.‌ ಸಮಯ ಬಂದಾಗ ಎಲ್ಲ ಬಿಚ್ಚುತ್ತೇನೆ. ಯಾರಿಗೂ ಹೆದರೋ ಮಗ‌ ಅಲ್ಲ ಈ ಶಿವಕುಮಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ, ಕೃಷ್ಣ ಭೈರೇಗೌಡ, ರಾಮಲಿಂಗ ರೆಡ್ಡಿ, ವಿನಯ್‌ಕುಮಾರ್ ಸೊರಕೆ, ಈಶ್ವರ ಖಂಡ್ರೆ ಸೇರದಿಂತೆ ರಾಜ್ಯದ ಹಲವು ಕಾಂಗ್ರೆಸ್‌ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು