ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪೈರುಗಳ ಕಟಾವು ಮಾಡಲು ರೈತರಿಗೆ ಅವಕಾಶವಾಗುತ್ತಿಲ್ಲ. ಹೀಗಾಗಿ ಬೆಳೆದು ನಿಂತ ಭತ್ತವು ಗದ್ದೆಯಲ್ಲಿಯೇ ನೆಲಕ್ಕೊರಗಿ ಮೊಳಕೆಯೊಡೆಯುತ್ತಿದೆ. ಮೆಕ್ಕೆಜೋಳ ತೆನೆ ಮುರಿಯಲು ಸಾಧ್ಯವಾಗದೇ ಅಲ್ಲಿಯೇ ಮೊಳೆಯುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ರೈತಾಪಿ ವರ್ಗ ಕಂಗೆಟ್ಟಿದೆ.

ಸಾಗರ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಭತ್ತ ಕಟಾವು ಮುಗಿಯುವ ಹಂತ ತಲುಪಿದೆ. ಕಟಾವು ಯಂತ್ರದ ನೆರವಿನಿಂದ ರೈತರು ಭತ್ತ ಒಕ್ಕಲು ಮಾಡಿದ್ದಾರೆ. ಶಿವಮೊಗ್ಗ, ಭದ್ರಾವತಿ ಹಾಗೂ ಶಿಕಾರಿಪುರ, ಸೊರಬ ತಾಲ್ಲೂಕುಗಳಲ್ಲಿ ಈಗ ಕಟಾವು ಆಗುತ್ತಿದೆ. ಇದಕ್ಕೆ ಮಳೆಯ ಆರ್ಭಟ ಅವಕಾಶ ಕೊಡುತ್ತಿಲ್ಲ.

ಈ ಬಾರಿ ಬೇಗನೇ ಮಳೆ ಶುರುವಾಗಿ ತೊಂದರೆ ಆಗಿದೆ. ಇಷ್ಟು ಬೇಗ, ಇಷ್ಟೊಂದು ಮಳೆ ಬರಲಿದೆ ಎಂಬ ಕಲ್ಪನೆಯೂ ನಮಗೆ ಇರಲಿಲ್ಲ. ಭತ್ತ ಗದ್ದೆಯಲ್ಲಿಯೇ ಮೊಳಕೆಯೊಡೆಯುತ್ತಿದೆ ಎಂದು ಶಿವಮೊಗ್ಗ ತಾಲ್ಲೂಕಿನ ಪುರದಾಳು ಗ್ರಾಮದ ಕೆ.ಅಣ್ಣಪ್ಪ ಅಳಲು ತೋಡಿಕೊಂಡರು.

ಅಣ್ಣಪ್ಪ 1.5 ಎಕರೆಯಲ್ಲಿ ಭತ್ತ ಬೆಳೆದಿದ್ದಾರೆ. ಮಳೆ ಬಿಡುತ್ತಿಲ್ಲ. ಭತ್ತ ತೆನೆಯಲ್ಲಿಯೇ ಮೊಳಕೆ ಹೊಡೆಯುತ್ತಿದೆ. ಈಗ ಮಳೆ ಬಿಡದಿದ್ದರೆ ಏನೂ ಮಾಡಲು ಆಗೊಲ್ಲ. ಬೆಳೆದ ಪೈರು ಕೈಗೆ ಸಿಗೊಲ್ಲ. ಈ ಬಾರಿ ಜ್ಯೋತಿ ಭತ್ತ ಬೆಳೆದಿದ್ದೆ. ಮಾರುಕಟ್ಟೆಯಲ್ಲೂ ಉತ್ತಮ ಬೆಲೆ ಇದೆ. ಇನ್ನು 15 ದಿನಗಳೊಳಗೆ ಒಂದು ವಾರ ಮಳೆ ಬಿಡುವು ಕೊಟ್ಟರೆ ಏನಾದರೂ ಮಾಡಬಹುದು. ಇಲ್ಲದಿದ್ದರೆ ಊಟಕ್ಕೂ ಭತ್ತ ಸಿಗುವುದು ಕಷ್ಟವಾಗುತ್ತದೆ ಎಂದರು.

ಎರಡು ವರ್ಷ ಫಸಲು ನಷ್ಟ: ಕಳೆದ ವರ್ಷದ ಫಸಲನ್ನು ಆನೆ ತಿಂದು ಹಾಕಿತ್ತು. ಈಗ ಮಳೆ ಹಾಳು ಮಾಡುತ್ತಿದೆ. 20 ದಿನಗಳ ಹಿಂದೆ ಭತ್ತ ಕಟಾವು ಮಾಡಿ ಹಾಕಿದ್ದೇನೆ. ಆದರೆ ಮಳೆಯಿಂದ ಅದನ್ನು ಮನೆಗೆ ತಂದು ಒಕ್ಕಲು ಮಾಡಲು ಆಗುತ್ತಿಲ್ಲ ಎಂದು ಪುರದಾಳಿನ ಗಣೇಶಪ್ಪ ನೊಂದುಕೊಂಡರು.

ಈ ಬಾರಿ ಉಣ್ಣಲು ಭತ್ತ ಇರಲಿ. ಹುಲ್ಲು ಕೂಡ ಸಿಗೊಲ್ಲ. ದನಗಳಿಗೆ ಮೇವು ಇಲ್ಲದಂತಾಗಿದೆ. ಎರಡೂವರೆ ಎಕರೆಗೆ 50 ಕ್ವಿಂಟಲ್ ಭತ್ತ ಸಿಗುತ್ತಿತ್ತು. ಈ ವರ್ಷ ಮಂಡಕ್ಕಿ ಭತ್ತ ಬಿತ್ತನೆ ಮಾಡಿದ್ದೆ. ಅದು ಈಗ ಕೈ ತಪ್ಪಿದೆ. ಕಳೆದ ಬಾರಿ ಆನೆ ಕಾಟ, ಈ ಸಾರಿ ಮಳೆಯಿಂದ ಎರಡು ಬೆಳೆ ನಷ್ಟ ಅನುಭವಿಸಿದಂತಾಗಿದೆ. ವರ್ತಕರ ಬಳಿ ಕೈ ಸಾಲ ಮಾಡಿ ಭತ್ತ ಬೆಳೆದಿದ್ದೇನೆ. ಈಗ ಮಂಡಿಯವರಿಗೆ ಏನು ಹೇಳುವುದು. ಗ್ರಾಮ ಪಂಚಾಯಿತಿ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಯಾರೂ ಇಲ್ಲಿ ಬಂದಿಲ್ಲ. ನಮ್ಮ ಕಷ್ಟ ಕೇಳಿಲ್ಲ ಎಂದು ಅಲವತ್ತುಕೊಂಡರು.

ಕಟಾವು ವೇಳೆ ಮಳೆಗೆ ಸಿಲುಕಿ ಧಾನ್ಯ ಹಾಳಾಗಿದ್ದರೆ ಬೆಳೆ ನಷ್ಟವಾಗಿದ್ದರೆ ಅಂತಹ ರೈತರಿಗೆ ಪರಿಹಾರ ಕಲ್ಪಿಸಲು ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆಗೆ ಸೂಚನೆ ನೀಡಿದ್ದೇನೆ.
– ಕಿರಣ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ

ರೈತರು ಕಟಾವು ಮುಂದೂಡಲಿ

ಜಿಲ್ಲೆಯಲ್ಲಿ ಭತ್ತ ಹಾಗೂ ಮೆಕ್ಕೆಜೋಳದ ಕಟಾವು ನಡೆಯುತ್ತಿದೆ. ಭದ್ರಾವತಿ ಶಿವಮೊಗ್ಗ ಶಿಕಾರಿಪುರ ತಾಲ್ಲೂಕುಗಳಲ್ಲಿ ಈಗ ಭತ್ತದ ಕಟಾವು ಶುರುವಾಗಿದೆ. ಮಳೆಯ ಕಾರಣ ರೈತರು ಕಟಾವು ಮುಂದೂಡಲಿ. ಮಳೆಯ ಪರಿಸ್ಥಿತಿ ನೋಡಿಕೊಂಡು ಕಟಾವು ಮಾಡಿದರೆ ಸೂಕ್ತ ಎಂದು ಜಂಟಿ ಕೃಷಿ ನಿರ್ದೇಶಕ ಕಿರಣ್ಕುಮಾರ್ ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.