ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 90 ಜನರು ಗುಣಮುಖ

1727ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ, ಮತ್ತೆ 124 ಮಂದಿಗೆ ಸೋಂಕು
Last Updated 30 ಜುಲೈ 2020, 17:07 IST
ಅಕ್ಷರ ಗಾತ್ರ

ಶಿವಮೊಗ್ಗ: ಒಂದು ವರ್ಷದ ಬಾಲಕ, ಖಾಸಗಿ ನರ್ಸಿಂಗ್ ಹೋಂನ ಸಿಬ್ಬಂದಿ, ತೀರ್ಥಹಳ್ಳಿ ತಾಲ್ಲೂಕು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಸೋಂಕುಸೇರಿ ಜಿಲ್ಲೆಯಲ್ಲಿ ಗುರುವಾರ 124 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.90 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ನಗರದಲ್ಲೇ 71 ಜನರಿಗೆ ಸೋಂಕು ಪತ್ತೆಯಾಗಿದೆ. ಭದ್ರಾವತಿಯ 14,ಶಿಕಾರಿಪುರ 20, ಸೊರಬ 1, ಸಾಗರ 5, ತೀರ್ಥಹಳ್ಳಿ 8, ಹೊಸನಗರ 3 ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಗೆ ಬಂದಿದ್ದ ಹೊರ ಜಿಲ್ಲೆಯ 2 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಒಟ್ಟು ಸೋಂಕಿತರ ಸಂಖ್ಯೆ 1,727ಕ್ಕೆ ಏರಿದೆ. ಗುರುವಾರ 90 ಜನರುಸೇರಿದಂತೆ 925 ಮಂದಿ ಗುಣಮುಖರಾಗಿದ್ದಾರೆ. ಮನೆಯಲ್ಲಿ 65, ಖಾಸಗಿ ಆಸ್ಪತ್ರೆಗಳಲ್ಲಿ 37 ಜನರು ಸೇರಿ ಒಟ್ಟು 771 ಜನರು ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 31 ಜನರು ಮೃತಪಟ್ಟಿದ್ದಾರೆ.

362 ಕಂಟೈನ್‌ಮೆಂಟ್ ಝೋನ್‌: ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ಒಟ್ಟು 362 ಕಂಟೈನ್‌ಮೆಂಟ್‌ ಝೋನ್‌ಗಳನ್ನು ಮಾಡಲಾಗಿದೆ. 97 ಝೋನ್‌ಗಳನ್ನು ತೆರವುಗೊಳಿಸಲಾಗಿದೆ.

ಶಿವಮೊಗ್ಗ ವಕೀಲರಿಗೆ ಸೋಂಕು ತಗುಲಿದ್ದುನ್ಯಾಯಾಲಯ ಸಂಕೀರ್ಣವನ್ನು ಸ್ಯಾನಿಟೈಸರ್ ಮಾಡಲಾಗಿದೆ.

ಭದ್ರಾವತಿಯಲ್ಲಿ 10 ಮಂದಿಗೆಸೋಂಕು

ತಂದೆ, ಮಗಳು ಸೇರಿ ನಗರ ವ್ಯಾಪ್ತಿಯಲ್ಲಿ 10 ಪ್ರಕರಣ ವರದಿಯಾಗಿವೆ. ಚಾಮೇಗೌಡಪ್ರದೇಶದಲ್ಲಿ50 ವರ್ಷದ ಪುರುಷ, 16 ವರ್ಷದ ಮಗಳಿಗೆ ಸೋಂಕು ತಗುಲಿದೆ. ಲೋಯರ್ ಹುತ್ತಾ ಸಮೀಪದ ಫಾರೆಸ್ಟ್ ಕಚೇರಿ ಸಮೀಪದ 30 ವರ್ಷದ ಗರ್ಭಿಣಿ, 28 ವರ್ಷದ ಪುರುಷ, ವೇಲೂರು ಶೆಡ್ 24 ಹಾಗೂ 26 ವರ್ಷದ ಪುರುಷರು, ಬೋವಿ ಕಾಲೊನಿ 35 ವರ್ಷದ ಪುರುಷ, 41 ವರ್ಷದ ಮಹಿಳೆ, ನಗರಸಭೆ ವಾಹನ ಸಹಾಯಕ 28 ವರ್ಷದ ಪುರುಷ ಹಾಗೂ ನೃಪತುಂಗ ನಗರದ 26ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಕಾರೇಹಳ್ಳಿ ಕೊರೊನಾ ಸೋಂಕಿತ 46 ವರ್ಷದ ಪುರುಷ ಗುರುವಾರ ಮೃತರಾದರು. ಜೂನ್ 23ರಂದು ಸೋಂಕಿಗೆ ಒಳಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಅವರ ಪತ್ನಿಗೂ ಸೋಂಕು ತಗುಲಿದೆ.

ಶಾಸಕರಆಪ್ತ ಸಹಾಯಕನಿಗೆಕೊರೊನಾ

ಹೊಳೆಹೊನ್ನೂರು: ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ಅವರ ಆಪ್ತ ಸಹಾಯಕ ಲಕ್ಷಣ್ ಸೇಠ್ ರವರಿಗೆಸೋಂಕುದೃಢಪಟ್ಟಿದೆ. ಶಾಸಕರನ್ನೂಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಬಾಣಂತಿ, ಆಯಾಗೆ ಕೊರೊನಾ

ಬಾಣಂತಿ, ಆಯಾಗೆ ಸೇರಿ ತಾಲ್ಲೂಕಲ್ಲಿ ಆರು ಮಂದಿಗೆ ಕೊರೊನಾ ದೃಢಪಟ್ಟಿದೆ.ಪಟ್ಟಣದ ಕೋರ್ಟ್ ರಸ್ತೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ ದಾಖಲಾಗಿದ್ದ 35 ವರ್ಷದ ಬಾಣಂತಿ, ಅದೇ ಆಸ್ಪತ್ರೆಯ 35 ವರ್ಷದ ಆಯಾ ಕೊರೊನಾ ಸೋಂಕು ತಗುಲಿದೆ.
ಎಸ್.ಎನ್.ನಗರ ಬಡಾವಣೆಯ 40 ವರ್ಷದ ಇಬ್ಬರು, 35 ವರ್ಷದ ಪುರುಷನಿಗೆ, ರಾಮನಗರ ಬಡಾವಣೆಯ 65 ವರ್ಷದ ಮಹಿಳೆಗೆಸೋಂಕು ಕಾಣಿಸಿಕೊಂಡಿದೆ.

ಸೊರಬ ತಾಲ್ಲೂಕಿನ ಆನವಟ್ಟಿ ಹೋಬಳಿ ವ್ಯಾಪ್ತಿಯ ಚಿಕ್ಕ ಇಡಗೋಡು ಗ್ರಾಮದ 21 ವರ್ಷದ ಯುವಕನಿಗೆ ಕೊರಾನಾ ಸೋಂಕು ಗುರುವಾರ ದೃಢಪಟ್ಟಿದೆ.

8 ಮಂದಿಗೆ ಕೊರೊನಾ(ತೀರ್ಥಹಳ್ಳಿ ವರದಿ)

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆಸೋಂಕುದೃಢಪಟ್ಟಿದೆ.ಪಟ್ಟಣದ ಟಿಬಿ ಕಾಲೊನಿಯ 25 ವರ್ಷದ ಪುರುಷ, ಸೀಬಿನಕೆರೆಯಲ್ಲಿ ಇಬ್ಬರಿಗೆ, ಕೋಣಂದೂರು ಆಸ್ಪತ್ರೆ 32 ವರ್ಷದ ಸಿಬ್ಬಂದಿ, 1 ವರ್ಷದ ಬಾಲಕನಿಗೂ ಸೋಂಕು ತಾಗಿದೆ. ಆರಗ ಗೇಟಿನ 14 ವರ್ಷಬಾಲಕನಿಗೆಸೋಂಕು ದೃಢಪಟ್ಟಿದೆ. ಕೋಣಂದೂರು ಆಸ್ಪತ್ರೆ ಹಾಗೂ ಪಟ್ಟಣ ಪಂಚಾಯತಿ ಕಚೇರಿ ಸೀಲ್ ಡೌನ್ ಮಾಡಲಾಗಿದೆ.

16 ಮಂದಿಗೆ ಕೊರೊನಾ (ಶಿಕಾರಿಪುರ ವರದಿ)

ತಾಲ್ಲೂಕಿನಲ್ಲಿ 16 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ.ಶಿಕಾರಿಪುರ ಪಟ್ಟಣದ ಜಯನಗರ ಬಡಾವಣೆ ನಿವಾಸಿಗಳಾದ ಪತಿ, ಪತ್ನಿಗೆ, ಬಾಲಕಿಗೆ, ದೊಡ್ಡಪೇಟೆ ನಿವಾಸಿ ಮಹಿಳೆಗೆ, ಶಿವಮೊಗ್ಗ ರಸ್ತೆ ನಿವಾಸಿ ಮಹಿಳೆಗೆ, ಪಟ್ಟಣದ ಒಬ್ಬ ಮಹಿಳೆಗೆ, ಒಬ್ಬ ಪುರುಷನಿಗೆ, ಕುಂಬಾರಗುಂಡಿಯಲ್ಲಿ ಒಬ್ಬ ಮಹಿಳೆಗೆ, ಆಶ್ರಯ ಬಡಾವಣೆಯಲ್ಲಿ ಒಬ್ಬ ಪುರುಷನಿಗೆ, ಗಾಮ ಗ್ರಾಮದಲ್ಲಿ ಒಬ್ಬ ಮಹಿಳೆಗೆ, ಕೊಟ್ಟ ಗ್ರಾಮದಲ್ಲಿ ಒಬ್ಬ ಮಹಿಳೆಗೆ, ತಡಗಣಿ ಗ್ರಾಮದಲ್ಲಿ ಒಬ್ಬ ಪುರುಷನಿಗೆ, ಮಾರವಳ್ಳಿ ತಾಂಡದ ಒಬ್ಬ ಯುವಕನಿಗೆ, ಅಂಜನಾಪುರ ಗ್ರಾಮದಲ್ಲಿ ಒಬ್ಬ ಪುರುಷನಿಗೆ, ಶಿರಾಳಕೊಪ್ಪ ಪಟ್ಟಣದ ಒಬ್ಬ ಮಹಿಳೆಗೆ, ಒಬ್ಬ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT