ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಗೆ ಸೋಂಕು: ನಗರ ಪಾಲಿಕೆ, ಜಿ.ಪಂ. ಸೀಲ್‌ಡೌನ್

ಒಂದೇ ದಿನ126 ಜನರಿಗೆ ಕೊರೊನಾ ಸೋಂಕು ದೃಢ, ಹಳೇ ಶಿವಮೊಗ್ಗ ಸೀಲ್‌ಡೌನ್ ತೆರವು
Last Updated 23 ಜುಲೈ 2020, 16:02 IST
ಅಕ್ಷರ ಗಾತ್ರ

ಶಿವಮೊಗ್ಗ: ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಜಿಲ್ಲಾ ಪಂಚಾಯಿತಿ ಹಾಗೂ ನಗರ ಪಾಲಿಕೆ ಕಚೇರಿಗಳನ್ನು ಗುರುವಾರ ಸೀಲ್‌ಡೌನ್ ಮಾಡಲಾಗಿದೆ.

ಪಾಲಿಕೆಯ ಲೆಕ್ಕಪತ್ರ ವಿಭಾಗದ ಒಬ್ಬರು ಸಿಬ್ಬಂದಿಗೆ ಹಾಗೂ ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ವಿಭಾಗದ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ಬೆಳೆಕಿಗೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಜು.27ರವರೆಗೆ ಸೀಲ್‌ಡೌನ್ಮುಂದುವರಿಯುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿಎರಡೂ ಕಚೇರಿಗಳಆವರಣ ಮತ್ತು ಕಚೇರಿಗಳನ್ನು ಸ್ಯಾನಿಟೈಸರ್ ಮಾಡಿದರು.

ಅಧಿಕಾರಿಗಳು, ಸಿಬ್ಬಂದಿ ಕ್ವಾರಂಟೈನ್: ಸಿಬ್ಬಂದಿಗೆ ಸೋಂಕು ದೃಢಪಟ್ಟ ಕಾರಣ ಅವರ ಸಂಪರ್ಕದಲ್ಲಿದ್ದ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಉಳಿದವರಿಗೆ ರಜೆ ನೀಡಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.

84 ಮಂದಿಗೆ ಕೊರೊನಾ ಪಾಸಿಟಿವ್:ಸೈನಿಕ ಸೇರಿ ಜಿಲ್ಲೆಯಲ್ಲಿ ಗುರುವಾರ126ಜನರಿಗೆಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 1143ಕ್ಕೇರಿದ್ದಾರೆ. ಗುರುವಾರ39 ಸೇರಿದಂತೆ 589 ಜನರುಗುಣಮುಖರಾಗಿದ್ದಾರೆ.ಮೃತರ ಸಂಖ್ಯೆ 20ಕ್ಕೆ ತಲುಪಿದೆ. 534 ಜನರು ವಿವಿಧ ಕೋವಿಡ್‌ ಹಾರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ದಿನ ಶಿವಮೊಗ್ಗ ನಗರದಲ್ಲಿ 50 ಜನರಿಗೆ ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಭದ್ರಾವತಿಯಲ್ಲಿ 19,ಶಿಕಾರಿಪುರ 38, ಸೊರಬ 7, ತೀರ್ಥಹಳ್ಳಿ 3, ಸಾಗರ6ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಗೆ ಬಂದಿದ್ದ ಹೊರ ಜಿಲ್ಲೆಯಮೂವರಿಗೆಸೋಂಕು ಇರುವುದು ದೃಢಪಟ್ಟಿದೆ.

276 ಕಂಟೈನ್‌ಮೆಂಟ್ ಝೋನ್‌: ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ಒಟ್ಟು 268 ಕಂಟೈನ್‌ಮೆಂಟ್‌ ಝೋನ್‌ಗಳನ್ನು ಮಾಡಲಾಗಿದೆ. 49 ಝೋನ್‌ಗಳನ್ನು ತೆರವುಗೊಳಿಸಲಾಗಿದೆ.

ಮೂವರಿಗೆ ಸೋಂಕು (ತೀರ್ಥಹಳ್ಳಿ ವರದಿ):ತಾಲ್ಲೂಕಿನಲ್ಲಿ ಗುರುವಾರ ಮೂವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಜಮ್ಮು ಕಾಶ್ಮೀರದಿಂದ ಕೋಣಂದೂರಿಗೆ 36 ವರ್ಷದ ಸೈನಿಕರಿಗೆ ಸೋಂಕು ತಗಲಿದೆ. ಅವರು ಹೋಂ ಕ್ವಾರಂಟೈನ್‌ನಲ್ಲಿದ್ದರು.
ಪಟ್ಟಣದ ಸೊಪ್ಪುಗುಡ್ಡೆ ಯಲ್ಲಿ 80 ವರ್ಷದವೃದ್ಧರಿಗೆಸೋಂಕುತಗುಲಿದೆ.ಈ ವ್ಯಕ್ತಿಯ ಪತ್ನಿಗೆ ಸೋಂಕು ಇರುವುದು ಎರಡು ದಿನಗಳು ಹಿಂದೆಪತ್ತೆಯಾಗಿತ್ತು.

ಮಂಡಗದ್ದೆ ಹೋಬಳಿ ತೂದೂರಿನ60 ವರ್ಷದ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಮೂವರಿಗೆ ಸೋಂಕು (ಸಾಗರ ವರದಿ):ತಾಲ್ಲೂಕಿನಲ್ಲಿ ಮೂವರಿಗೆ ಕೊರೋನ ಸೋಂಕು ತಗುಲಿರುವುದು ಗುರುವಾರ ಧೃಡಪಟ್ಟಿದೆ. ಆನಂದಪುರಂನ 47 ವರ್ಷದ ಮಹಿಳೆ ಹಾಗೂ ಅವರ 27 ವರ್ಷದ ಪುತ್ರನಿಗೆ ಸೋಂಕು ತಗುಲಿದೆ.ಆವಿನಹಳ್ಳಿಯ26 ವರ್ಷದ ಯುವಕನಿಗೆ ಸೋಂಕು ಇರುವುದು ಬೆಳಕಿಗೆ ಬಂದಿದೆ.

ಭದ್ರಾವತಿಯಲ್ಲಿ 19 ಪಾಸಿಟಿವ್
ಭದ್ರಾವತಿ:
ಪ್ರಾಥಮಿಕ ಸಂಪರ್ಕದಿಂದ ಸೋಂಕಿತ ಗೊಂಡ 13 ಪ್ರಕರಣ ಗುರುವಾರ ವರದಿಯಾಗಿದೆ. ಹುಡ್ಕೋಕಾಲೋನಿ 22 ವರ್ಷದ ಮಹಿಳೆ, 44 ವರ್ಷದ ಮಹಿಳೆ, ನ್ಯೂಟೌನ್ ಪ್ರದೇಶದ 25 ವರ್ಷದ ಮಹಿಳೆ, ಬೋವಿಕಾಲೋನಿ 65 ವರ್ಷದ ಪುರುಷ ನಿಗೆ ಸೋಂಕು ತಗುಲಿದೆ.

ದೇವರನರಸೀಪುರದ32 ವರ್ಷದ ತಾಯಿ ಮತ್ತು6 ವರ್ಷದ ಮಗಳಿಗೆ ಸೋಂಕು ತಗುಲಿದೆ. ದೇವರನರಸೀಪುರ, ಸಿರಿಯೂರು ವೀರಾಪುರ, ಭಾಗದಲ್ಲಿ ಪ್ರಕರಣ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನಗರದ ಹೊಸಮನೆ, ಕಾಗದನಗರ, ಶಿವರಾಂ ನಗರ, ಕಾರೇಹಳ್ಳಿ, ನ್ಯೂಟನ್, ಕನಕನಗರ ಸೇರಿದಂತೆ ವಿವಿಧ ಬಡಾವಣೆಯ ಬಹುತೇಕ ರಸ್ತೆಗಳು ಸೀಲ್‌ಡೌನ್ಆಗಿದೆ.

ಬಾರಂದೂರಿನ44 ವರ್ಷದ ಮಹಿಳೆಗೆ ಸೋಂಕು ತಗುಲಿದೆ.ಖಲಂದರ್ ನಗರದ 74 ವರ್ಷದ ಪತಿ, 66 ವರ್ಷದ ಪತ್ನಿಗೆ ಸೋಂಕು ತಗುಲಿದೆ. ಶಿವರಾಂ ನಗರದ 19 ವರ್ಷದ ಯುವಕ, 58 ವರ್ಷದ ಮಹಿಳೆ, 35 ವರ್ಷದ ಮಹಿಳೆ ಹಾಗೂ 18 ವರ್ಷದ ಯುವತಿಯಲ್ಲಿ ಸೋಂಕು ದ್ರಢಪಟ್ಟಿದೆ. ಬಿಎಚ್ ರಸ್ತೆ ಹಾಲಪ್ಪ ವ್ರತ್ತದ 29 ವರ್ಷದ ಪುರುಷ, ಹೊಸಮನೆ ಎಡಭಾಗದ 35 ವರ್ಷದ ಪುರುಷ ಹಾಗೂ ಎನ್ಎಂಸಿ ವ್ಯಾಪ್ತಿಯ 55 ವರ್ಷದ ಪುರುಷನಲ್ಲಿ ಸೋಂಕು ಕಂಡುಬಂದಿರುವುದಾಗಿ ಮೂಲಗಳು ತಿಳಿಸಿವೆ.

ನಗರಸಭೆ ಆಯುಕ್ತ ಮನೋಹರ್,ಎಸ್.ರುದ್ರೇಗೌಡ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ, ಆರೋಗ್ಯ ನಿರೀಕ್ಷಕ ನಿಲೇಶರಾಜ್, ಸ್ಥಳಕ್ಕೆ ತೆರಳಿ, ಸ್ಯಾನಿಟೈಸಿಂಗ್ ಕಾರ್ಯಕೈಗೊಂಡರು.

67ಕ್ಕೇರಿದ ಸೋಂಕಿತರು (ಸೊರಬವರದಿ):ತಾಲ್ಲೂಕಿನಲ್ಲಿ ಗುರುವಾರ7 ಜನರಿಗೆ ಕೊರಾನಾ ಸೋಂಕು ದೃಢಪಟ್ಟಿದೆ.ತಾಲ್ಲೂಕಿನ ಉದ್ರಿ ಗ್ರಾಮದ ‌35 ವರ್ಷದ ಮಹಿಳೆ,‌ ಗೆಂಡ್ಲ‌ ಗ್ರಾಮದ ‌35 ವರ್ಷದ ಪುರುಷ, ಕುಣಿತೆಪ್ಪ ಗ್ರಾಮದ 60 ವರ್ಷದ ಮಹಿಳೆ ಹಾಗೂ ಪಟ್ಟಣದ ಮರೂರು ರಸ್ತೆಯ 50 ವರ್ಷದ ಪುರುಷ ಹಾಗೂ 47 ವರ್ಷದ ಮಹಿಳೆಗೆಕೊರಾನಾ ವೈರಸ್ ದೃಢಪಟ್ಟಿದೆ. ತಾಲ್ಲೂಕಿನಲ್ಲಿ ಕೊರಾನಾ ಸೋಂಕಿತರ ಸಂಖ್ಯೆ ‌ಒಟ್ಟು 67ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT