ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿಯಲ್ಲಿ ಭ್ರಷ್ಟಾಚಾರ: ಅರಣ್ಯ ರಕ್ಷಕ ಪ್ರತಿಭಟನೆ

Last Updated 13 ಜನವರಿ 2022, 14:44 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶ್‌ ಕುಮಾರ್ ಅವರು ಅರಣ್ಯ ರಕ್ಷಕರಿಗೆ ಉಪ ವಲಯ ಅರಣ್ಯಾಧಿಕಾರಿಗಳಾಗಿ ತರಾತುರಿಯಲ್ಲಿ ಬಡ್ತಿ ನೀಡಿದ್ದಾರೆ ಎಂದು ಆರೋಪಿಸಿ ಶ್ರೀಗಂಧ ಕೋಟಿ ಸಿಸಿಎಫ್‌ ಕಚೇರಿ ಎದುರು ಶಾಂತಿ ಸಾಗರ ವಲಯದ ಅರಣ್ಯ ರಕ್ಷಕ ಜಯರಾಂ ಗುರುವಾರ ಪ್ರತಿಭಟನೆ ನಡೆಸಿದರು.

‘ಬಡ್ತಿಗೆ ಸಂಬಂಧಿಸಿದಂತೆ ನೌಕರರೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಹೊಸ ಹುದ್ದೆಗಳನ್ನು ಸೃಷ್ಟಿಸಿ ಬಡ್ತಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೆಚ್ಚು ಹಣಕೊಟ್ಟವರಿಗೆ ನಿಯಮ 42ರ ಅಡಿ ಉಪ ವಲಯ ಅರಣ್ಯಾಧಿಕಾರಿಗಳಾಗಿ, ಕಡಿಮೆ ಹಣ ಕೊಟ್ಟವರಿಗೆ ನಿಯಮ 32ರ ಅಡಿ ಹಿರಿಯ ಅರಣ್ಯ ರಕ್ಷಕರಾಗಿ ಬಡ್ತಿ ನೀಡಿದ್ದಾರೆ. ಹಣ ನೀಡದವರಿಗೆ ಹಿಂಬಡ್ತಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಅರ್ಹತೆ ಇದ್ದರೂ ಹಣ ನೀಡಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಬಡ್ತಿ ನೀಡಿಲ್ಲ. ಇಂತಹ ಅಧಿಕಾರಿಗಳಿಂದ ನೌಕರರಿಗೆ ಅನ್ಯಾಯವಾಗುತ್ತಿದೆ’ ಎಂದು ಜಯರಾಂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT