ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯ ಆವರಣದಲ್ಲಿ ನ್ಯಾಯಾಂಗ ನೌಕರರ ಭವನಕ್ಕೆ ವಕೀಲರ ವಿರೋಧ

ವಾಹನಗಳ ನಿಲುಗಡೆಗೆ, ವಕೀಲರ ಭವನಕ್ಕೆ ಅಡ್ಡಿ: ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ
Last Updated 6 ಮೇ 2022, 4:31 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ನ್ಯಾಯಾಲಯದ ಆವರಣದ ವಾಹನ ನಿಲುಗಡೆ ಸ್ಥಳದಲ್ಲಿ ನ್ಯಾಯಾಂಗ ನೌಕರರ ಭವನ ನಿರ್ಮಾಣಕ್ಕೆ ವಕೀಲರ ಸಂಘದ ವಿರೋಧವಿದೆ. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕು. ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ ಒತ್ತಾಯಿಸಿದರು.

ಶಿವಮೊಗ್ಗ ವಕೀಲರ ಸಂಘ ಶತಮಾನಗಳಷ್ಟು ಹಳೆಯ ಸಂಘ. ಈಗ ಇರುವ ನ್ಯಾಯಾಲಯ ಕಟ್ಟಡ 1972ರಲ್ಲಿ ನಿರ್ಮಾಣವಾಗಿದೆ. ಮುಂದಿನ ಹಲವು ವರ್ಷಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕಕ್ಷಿದಾರರಿಗೆ, ನ್ಯಾಯಾಲಯಕ್ಕೆ ಬರುವ ವಕೀಲರಿಗೆ ವಾಹನಗಳ ಸಂಖ್ಯೆಯ ಅಂದಾಜಿನ ಮೇಲೆ ಕಟ್ಟಡಗಳ ಸುತ್ತಲೂ ವಾಹನಗಳ ನಿಲುಗಡೆಗೆ ಜಾಗ ಕಾಯ್ದಿರಿಸಿದೆ. ಆ ಜಾಗದಲ್ಲಿ ನೌಕರರ ಕಟ್ಟಡ ನಿರ್ಮಾಣ ಮಾಡಿದರೆ ಸಮಸ್ಯೆಯಾಗಲಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

1972ರಲ್ಲಿ 70ರಷ್ಟಿದ್ದ ವಕೀಲರ ಸಂಖ್ಯೆ ಈಗ 1,250 ದಾಟಿದೆ. ಮಾಜಿ ಮುಖ್ಯಮಂತ್ರಿಗಳಾದ ಕಡಿದಾಳ್ ಮಂಜಪ್ಪ, ಜೆ.ಎಚ್. ಪಟೇಲ್, ಎಸ್.ಬಂಗಾರಪ್ಪ ಮತ್ತಿತರ ಗಣ್ಯರು ಈ ಸಂಘದ ಸದಸ್ಯರಾಗಿದ್ದರು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಪೊಲೀಸ್ ವಾಹನಗಳು, ಸರ್ಕಾರಿ ನೌಕರರ ವಾಹನಗಳ ನಿಲುಗಡೆಗೆ ಜಾಗ ಸಾಕಾಗುತ್ತಿಲ್ಲ. ಆದರೂ, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ನಿಯಮಬಾಹಿರವಾಗಿ ವಕೀಲರ ಭವನದ ಮುಂಭಾಗ ನ್ಯಾಯಾಂಗ ನೌಕರರರ
ಸಂಘ ಅನುಮತಿ ಪಡೆಯದೆ ಸ್ಥಳದಲ್ಲಿದ್ದ ದೊಡ್ಡ ಮರ ಕಡಿದು ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದೆ ಎಂದು ದೂರಿದರು.

ನ್ಯಾಯಾಲಯದ ಸಮೀಪವೇ ನ್ಯಾಯಾಂಗ ನೌಕರರನ್ನು ಒಳಗೊಂಡ ಸರ್ಕಾರಿ ನೌಕರರ ಭವನವಿದೆ. ನ್ಯಾಯಾಂಗ ನೌಕರರಿಗೆ ಮತ್ತೆ ಹೊಸದಾಗಿ ಇನ್ನೊಂದು ಕಟ್ಟಡ ಅಗತ್ಯವಿಲ್ಲ. ಈ ಕಟ್ಟಡ ನಿರ್ಮಾಣದಿಂದ ವಕೀಲರ ಭವನಕ್ಕೆ ಗಾಳಿ, ಬೆಳಕಿಗೆ ತೊಂದರೆಯಾಗುತ್ತದೆ. ಜಿಲ್ಲಾಧಿಕಾರಿ ಸಹ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಹಾಗಾಗಿ, ತಕ್ಷಣ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಪ್ಪ, ಖಜಾಂಚಿ ಎಸ್. ಗಿರೀಶ್, ಮುಖಂಡರಾದ ಡಿ.ಬಿ. ಚಂದ್ರಕುಮಾರ್, ಜಿ. ವಿದ್ಯಾರಾಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT