ಶುಕ್ರವಾರ, ಆಗಸ್ಟ್ 6, 2021
22 °C

ತಾಯಿ ನಿಂದನೆ: ತಂದೆಯನ್ನೇ ಕೊಂದ ಪುತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತಾಯಿಯನ್ನು ನಿಂದಿಸಿದ ಕಾರಣ ಆಕ್ರೋಶಗೊಂಡ ಪುತ್ರ ತಂದೆಯನ್ನೇ ಕೊಲೆ ಮಾಡಿದ್ದಾನೆ.

ಬೊಮ್ಮನಕಟ್ಟೆ ಬಡಾವಣೆ ಸಿದ್ದಪ್ಪ ನಗರದ ಮಂಜುನಾಥ (56) ಕೊಲೆಯಾದವರು. 24 ವರ್ಷದ ಪುತ್ರ ರಾಕೇಶ್ ತಂದೆಯನ್ನೇ ಕೊಲೆ ಮಾಡಿರುವ ಆರೋಪಿ.

ಮಂಜುನಾಥ ಅವರ ಹಿರಿಯ ಪುತ್ರಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಾಯಿ ಕೂಡ ಆಸ್ಪತ್ರೆಗೆ ತೆರಳಿದ್ದರು. ಮದ್ಯ ಸೇವಿಸಿ ಸೋಮವಾರ ರಾತ್ರಿ ಮನೆಗೆ ಬಂದಿದ್ದ ಮಂಜುನಾಥ ಮಗನ ಜತೆ ಜಗಳ ಮಾಡಿದ್ದಾರೆ. ಪತ್ನಿಯನ್ನು ನಿಂದಿಸಿದ್ದಾರೆ.

‘ತಂದೆಯ ಮಾತಿನಿಂದ ಕುಪಿತಗೊಂಡ ರಾಕೇಶ್ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದಿದ್ದಾನೆ. ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.