ಸಾಗರ: ಭಾಷೆ, ಸಂಸ್ಕೃತಿಯನ್ನು ಕಾಪಾಡುವ ಶಕ್ತಿ ಮಹಿಳೆಯರಲ್ಲಿದೆ ಎಂದು ದೇಸಿ ಚಿಂತಕ ಪ್ರಸನ್ನ ಹೇಳಿದರು.

ಇಲ್ಲಿನ ಬ್ರಾಸಂ ಸಭಾಭವನದಲ್ಲಿ ಜೀವನ್ಮುಖಿ ಸಂಸ್ಥೆ ಈಚೆಗೆ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕಾಯಕ ಸಂಸ್ಕೃತಿ ಇಂದಿಗೂ ಜೀವಂತವಾಗಿದ್ದರೆ ಅದು ಮಹಿಳೆಯರಿಂದಲೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳ ಯಶಸ್ಸಿನ ಹಿಂದೆ ಮಹಿಳೆಯರ ಶ್ರಮವಿದೆ. ಮಹಿಳೆಯರ ಅಭಿವೃದ್ಧಿ ಎಂದರೆ ಅದು ಒಟ್ಟಾರೆ ಸಮಾಜದ ಅಭಿವೃದ್ಧಿಯ ಸಂಕೇತ ಎಂದರು.

ಈ ವೇಳೆ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಕೆ. ರಮಾ, ಮಂಜುಳಾ ನಾರಾಯಣ ಸ್ವಾಮಿ, ಗಿರಿಜಾ, ಶರಣ್ಯ ನವೀನ್, ಪ್ರವೀಣ, ಪದ್ಮಾ, ನಂದಿನಿ, ರೂಪಾ ಶಶಿಧರ್ ಮೊದಲಾದವರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಪ್ರಮುಖರಾದ ಸಾವಿತ್ರಿ ಕೆ.ಜಿ. ಶಿವಪ್ಪ, ಪದ್ಮಶ್ರೀ, ಎಂ.ವಿ. ಪ್ರತಿಭಾ, ರಮೇಶ್, ಸೌದಾಮಿನಿ, ಪೀಟರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.