ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಹೋತ್ಸವ ಸಡಗರ

Last Updated 16 ಅಕ್ಟೋಬರ್ 2021, 4:42 IST
ಅಕ್ಷರ ಗಾತ್ರ

ಸಾಗರ: ಮೈಸೂರಿನ ರೀತಿಯಲ್ಲಿಯೇ ಮಲೆನಾಡಿನ ವಿವಿಧ ಭಾಗಗಳಲ್ಲೂ ವೈಶಿಷ್ಟ್ಯಪೂರ್ಣ ಆಚರಣೆಗಳೊಂದಿಗೆ ದಸರಾ ಮಹೋತ್ಸವ ನಡೆದುಕೊಂಡು ಬಂದಿರುವುದು ವಿಶೇಷ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಹೇಳಿದರು.

ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಶುಕ್ರವಾರ ಬನ್ನಿ ಮುರಿಯುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲೆನಾಡು ಪ್ರದೇಶ ಸಾಂಸ್ಕೃತಿಕ, ಸಾಹಿತ್ಯಿಕ ಸಮೃದ್ಧತೆ ಹೊಂದಿರುವ ಜೊತೆಗೆ ಧಾರ್ಮಿಕ ಆಚರಣೆಗಳ ವಿಷಯದಲ್ಲೂ ಹಲವು ಮಹತ್ವದ ಸಂಗತಿಗಳನ್ನು ತನ್ನ ಒಡಲಿನೊಳಗೆ ಇರಿಸಿಕೊಂಡಿದೆ. ಇಲ್ಲಿನ ದಸರಾ ಹಬ್ಬದ ಆಚರಣೆಗಳಿಗೂ ಮಾರಿಕಾಂಬಾ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ದೇವಸ್ಥಾನದ ಸಮಿತಿ ಈ ಆಚರಣೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಂಡು ಬರುತ್ತಿದೆಎಂದರು.

ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ‘ನವರಾತ್ರಿ ಸಂದರ್ಭದಲ್ಲಿ 9 ದಿನಗಳ ಕಾಲ ಮಾರಿಕಾಂಬಾ ದೇವಿಯ ತವರುಮನೆ ಹಾಗೂ ಗಂಡನ ಮನೆ ದೇವಸ್ಥಾನದಲ್ಲಿ ಉತ್ಸವವನ್ನು ಶ್ರದ್ಧಾ, ಭಕ್ತಿಯಿಂದ ನಡೆಸಲಾಗಿದೆ’ ಎಂದು ತಿಳಿಸಿದರು.

ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ. ಗಿರಿಧರರಾವ್, ಖಜಾಂಚಿ ನಾಗೇಂದ್ರ ಎಸ್. ಕುಮಟಾ, ಸದಸ್ಯರಾದ ಬಸವರಾಜ್, ಗಂಗಾಧರ ಜಂಬಿಗೆ, ಕೆ.ಸಿ.ನವೀನ್, ತಾರಾಮೂರ್ತಿ, ಜಯರಾಮ್, ಡಿ.ದಿನೇಶ್, ಪ್ರಧಾನ ಅರ್ಚಕ ರವಿ ಪೋತರಾಜ, ಕಂದಾಯ ಇಲಾಖೆಯ ಆನಂದ ನಾಯ್ಕ್, ಬಸವರಾಜ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT