ಸೋಮವಾರ, ಮೇ 10, 2021
20 °C
ಭದ್ರಾವತಿ ನಗರಸಭೆ ಚುನಾವಣೆ

ಚುನಾವಣೆ: ಕಣದಲ್ಲಿ ಮಾಜಿ ಸದಸ್ಯರು, ಸಂಬಂಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‌ಭದ್ರಾವತಿ: ನಗರಸಭೆ ಚುನಾವಣೆಯ ಕಣ ರಂಗೇರಿದೆ. 35ನೇ ವಾರ್ಡ್ ಚುನಾವಣೆಯಲ್ಲಿ ನಗರಸಭಾ ಮಾಜಿ ಸದಸ್ಯರು, ಅವರ ಸಂಬಂಧಿಗಳು ಕಣದಲ್ಲಿರುವುದು ಚುನಾವಣೆಯ ಬಿಸಿ ಹೆಚ್ಚಿಸಿದೆ.

ನಗರಸಭಾ ಮಾಜಿ ಸದಸ್ಯರಾದ ಕಾಂಗ್ರೆಸ್‌ನ ಬಿ.ಕೆ.ಮೋಹನ್, ಅಂಜನಪ್ಪ, ಮಣಿ, ರೇಣುಕಮ್ಮ, ಟಿಪ್ಪು ಸುಲ್ತಾನ್, ಪುಟ್ಟೇಗೌಡ, ಚನ್ನಪ್ಪ, ಬಿಜೆಪಿಯ ವಿ.ಕದಿರೇಶ್, ಜಿ.ಆನಂದಕುಮಾರ್, ಜೆಡಿಎಸ್ ನಗರಾಧ್ಯಕ್ಷ ಆರ್.ಕರುಣಾಮೂರ್ತಿ, ವಿಶಾಲಾಕ್ಷಿ, ರವಿಕುಮಾರ್, ಎಚ್.ಬಿ.ರವಿಕುಮಾರ್, ಮಾಜಿ ಅಧ್ಯಕ್ಷೆ ಎಂ.ಎಸ್.ಸುಧಾಮಣಿ ಕಣದಲ್ಲಿದ್ದಾರೆ.

ಮಾಜಿ ಸದಸ್ಯ ಬಿ.ಕೆ.ಮೋಹನ್ ಪುತ್ರ ಮಂಜುನಾಥ, ಅವರ ಸೋದರ ಸಂಬಂಧಿ ಎಚ್.ವಿದ್ಯಾ, ಮಾಜಿ ಸದಸ್ಯರಾದ ಮೂರ್ತೂಝಾ ಖಾನ್ ಪತ್ನಿ ತಬಸತ್ ಸುಲ್ತಾನ್ ಖಾನ್, ಶಿವರಾಜ್ ಪತ್ನಿ ರೇಣುಕಾ, ಸುಬ್ಬಣ್ಣ ಅವರ ಪತ್ನಿ ಮಂಜುಳಾ, ಬದರಿನಾರಾಯಣ ಪತ್ನಿ ಕೆ.ಪ್ರೇಮ, ಗುಣಶೇಖರ್ ಪತ್ನಿ ರೂಪವತಿ, ನಗರಸಭೆ ಮಾಜಿ ಉಪಾಧ್ಯಕ್ಷ ಮೆಹಬೂಬ್ ಸಾಬ್ ಪುತ್ರ ಅಬ್ದುಲ್ ಮಜೀದ್, ಮಾಜಿ ಸದಸ್ಯೆ ದೇವಿಕಾ ಪುತ್ರ ಉಮೇಶ್, ಮೋಹನರಾವ್ ಪತ್ನಿ ಶಾಂತಿ, ಮಾಜಿ ಸದಸ್ಯೆ ಶೋಭಾ ರವಿಕುಮಾರ್ ಕಣದಲ್ಲಿರುವುದು ಕುತೂಹಲ ಹೆಚ್ಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು