ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ ಗಡಿ ಭಾಗಕ್ಕೆ ಆನೆಗಳು ಲಗ್ಗೆ

Last Updated 17 ಫೆಬ್ರುವರಿ 2023, 6:22 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಕಡೆಯಿಂದ ಬಂದಿರುವ ಐದು ಆನೆಗಳು ತಾಲ್ಲೂಕಿನ ಮುಡುಬ ಸಮೀಪದ ಕೋಣನಕೆರೆ ಗ್ರಾಮದಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿವೆ. ಕೋಣನಕೆರೆ ಕೃಷ್ಣಮೂರ್ತಿ ಗೌಡ ಎಂಬುವವರ ತೋಟದಲ್ಲಿ 200ಕ್ಕೂ ಹೆಚ್ಚು ಅಡಿಕೆ ಮರಗಳು ಆನೆ ದಾಳಿಗೆ ತುತ್ತಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಆನೆಗಳನ್ನು ಅರಣ್ಯಕ್ಕೆ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಭಾಗದಲ್ಲಿ ಬಹಳಷ್ಟು ಆನೆಗಳಿವೆ. ಅಭಯಾರಣ್ಯದ ಸುತ್ತ ಆನೆಗಳು ದಾಟದಂತೆ ಟ್ರಂಚ್‌ ತೆಗೆಯಲಾಗಿದೆ. ಹೊಸ ವಿಧಾನ ಅಳವಡಿಸಿಕೊಳ್ಳಲು ಯೋಚಿಸಲಾಗುತ್ತಿದೆ ಎಂದು ಎನ್‌.ಆರ್‌.ಪುರ ಆರ್‌ಎಫ್‌ಓ ಸಂತೋಷ್‌ ಸಾಗರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT