ಶನಿವಾರ, ಏಪ್ರಿಲ್ 17, 2021
33 °C

ಸಾಕಾನೆ ದಾಳಿ: ವೈದ್ಯ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಕ್ರೆಬೈಲಿನ ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ಭಾನುವಾರ ಆನೆಯೊಂದು ದಾಳಿ ನಡೆಸಿದ್ದು, ಅನಾಹುತದಿಂದ ಡಾ.ವಿನಯ್ ಪಾರಾಗಿದ್ದಾರೆ.

ಎರಡು ದಿನಗಳ ಹಿಂದೆ ಆನೆ ಬಿಡಾರದಲ್ಲಿ ನೀಲಾಂಬರಿ ಆನೆಯು ಮರಿಗೆ ಜನ್ಮ ನೀಡಿತ್ತು. ತಾಯಿ ಹಾಗೂ ಮರಿಯಾನೆಯ ಔಷಧೋಪಚಾರಕ್ಕೆ ತೆರಳಿದ್ದ ವೈದ್ಯ ವಿನಯ್ ಅವರಿಗೆ ನೀಲಾಂಬರಿ ಆನೆ ಸೊಂಡಿಲಿನಿಂದ ತಿವಿದಿದೆ. ತಿವಿತದಿಂದ ವಿನಯ್ ಅವರ ಎರಡು ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಹೆಚ್ಚಿನ ತರಬೇತಿ ಮತ್ತು ಆರೈಕೆಗಾಗಿ ನೀಲಾಂಬರಿ ಆನೆಯನ್ನು ಚಿತ್ರದುರ್ಗದ ಮುರುಘಾ ಮಠ ದಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಈಚೆಗೆ ಕರೆತರಲಾಗಿತ್ತು. ಆನೆ ಮೊದಲಿನಿಂದಲೂ ಆಕ್ರಮಣ ಕಾರಿ ಸ್ವಭಾವ ಹೊಂದಿದ್ದು, ಯಾವಾಗಲೂ ಮಾವುತ ಜೊತೆ ಗಿರಬೇಕಾದ ಅನಿವಾರ್ಯ ಎದುರಾ ಗಿದೆ. ದಾಳಿ ವೇಳೆ ಮಾವುತ ಸ್ಥಳದಲ್ಲಿ ಇರಲಿಲ್ಲ ಎಂದು ಡಾ.ವಿನಯ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.