ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ತತ್ವ ಅಳವಡಿಸಿಕೊಳ್ಳಿ: ಮಧು ಬಂಗಾರಪ್ಪ ಸಲಹೆ

Last Updated 15 ಏಪ್ರಿಲ್ 2022, 4:35 IST
ಅಕ್ಷರ ಗಾತ್ರ

ಆನವಟ್ಟಿ: ‘ರಾಜಕೀಯ ಪಕ್ಷಗಳು ಇಂದು ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತವೆ. ಎಲ್ಲಾ ರಾಜಕೀಯ ಪಕ್ಷಗಳು ಜಯಂತಿಯನ್ನು ಶೋಕಿಗಾಗಿ ಮಾಡದೆ, ನಿತ್ಯ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ಆಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲುತ್ತದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಆನವಟ್ಟಿಯ ಮಲ್ಲಿಕಾರ್ಜುನ್‌ಗೌಡ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ 131ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರಿಗೆ ಆಳಾಗಿದ್ದಂತೆ ಸ್ವತಂತ್ರ ಭಾರತದಲ್ಲಿ ಮತ್ತೆ ಧರ್ಮದ ಹೆಸರಲ್ಲಿ ಆಳಾಗುವುದು ಬೇಡ. ಪವಿತ್ರ ಗ್ರಂಥಗಳಾದ ಮಹಾಭಾರತ, ಕುರಾನ್, ಬೈಬಲ್ ಸೇರಿ ಇತರ ಗ್ರಂಥಗಳನ್ನು ಒಳಗೊಂಡ ಎಲ್ಲಾ ಧರ್ಮೀಯರಿಗೂ ಒಪ್ಪುವಂತಹ ಹಾಗೂ ಜಗತ್ತಿಗೆ ಮಾದರಿಯಾಗುವಂತಹ ಸಂವಿಧಾನ ಎಂಬ ಮಹಾನ್ ಗ್ರಂಥವನ್ನು ಅಂಬೇಡ್ಕರ್ ನೀಡಿದ್ದಾರೆ. ಧರ್ಮ-ಧರ್ಮದ ನಡುವೆ ಕಚ್ಚಾಟ ಮಾಡದೆ ಹೇಗೆ ಬದುಕಬೇಕು ಅನ್ನುವುದನ್ನು ಅವರು ಬರೆದುಕೊಟ್ಟಿದ್ದಾರೆ. ಅದನ್ನು ನೋಡಿಕೊಂಡು ಹೋದರೆ ಸಾಕು’ ಎಂದರು.

ಇಂದಿನ ರಾಜಕೀಯ ಸಂವಿಧಾನ ವಿರುದ್ಧವಾಗಿ ಹೋಗುತ್ತಿದೆ. ದೇಶದಲ್ಲಿ ಶಾಂತಿ, ಸೌಹರ್ದತೆ, ಸಹೋದರತ್ವ ನೆಲೆಸುವ ಬದಲು, ದ್ವೇಶ, ಧರ್ಮದ ಹೆಸರಲ್ಲಿ ಕಚ್ಚಾಟ, ಜನರ ಭಾವನೆಗಳ ಮೇಲೆ ರಾಜಕರಣ ನಡೆಯುತ್ತಿದೆ. ಇಂತಹ ಬೆಳೆವಣಿಗೆಗಳು ಒಳ್ಳೇಯದಲ್ಲ. ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಗೌರವಿಸಿ, ಸಂವಿಧಾನದ ಹಾದಿಯಲ್ಲಿ ನಡೆದುಕೊಂಡಾಗ ಮಾತ್ರ ಅಂಬೆಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದರು.

ಕಾಂಗ್ರೆಸ್ ಮುಖಂಡರಾದ ಮಧುಕೇಶ್ವರ ಪಾಟೀಲ್, ಜರ್ಮಲೆ ಚಂದ್ರಶೇಖರ್, ಹಬೀಬುಲ್ಲಾ ಹವಾಲ್ದಾರ್, ಸಂಜೀವ ತರಕಾರಿ, ಓಂಕಾರಿ ನಾಯ್ಕ, ಶಿವಕುಮಾರ ಚೌಟಿ, ಸುರೇಶ್ ಗೌಡ ಕಾತುವಳ್ಳಿ, ಅಜೀಂ ಸಾಬ್, ಅಲ್ಲಾಬಕ್ಷ, ಬಸವರಾಜ ಅಗಸನಹಳ್ಳಿ, ಜಾಫರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT