ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹಾವು ಸಾವು: ಶಿವಮೊಗ್ಗದಲ್ಲಿ ಎಂಜಿನಿಯರ್ ವಿರುದ್ಧ ದೂರು ದಾಖಲು

Last Updated 9 ಡಿಸೆಂಬರ್ 2021, 6:09 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿಯಭಾರ್ಗವಿ ಪೆಟ್ರೋಲ್ ಪಂಪ್ ಬಳಿ ಸ್ಮಾರ್ಟ್‌ ಸಿಟಿ ಕಾಮಗಾರಿಯ ಕಾರಣ ಆಂಜನೇಯ ಸ್ವಾಮಿ ದೇವಾಲಯದ ಕಟ್ಟಡವನ್ನು ತೆರವುಗೊಳಿಸುವಾಗ ಪ್ರತ್ಯಕ್ಷವಾದ ನಾಗರಹಾವನ್ನು ಜೆಸಿಬಿಯಿಂದ ಕೊಂದ ಪ್ರಕರಣಕ್ಕೆ ಸಬಂಧಿಸಿ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಭಾನುವಾರ ಭಾರ್ಗವಿ ಪೆಟ್ರೋಲ್ ಪಂಪ್ ಬಳಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆದಾಗ ಫುಟ್‌ಪಾತ್ ಮೇಲೆ ಇದ್ದ ದೇವಸ್ಥಾನವನ್ನು ಕೆಡವಲಾಗಿತ್ತು. ಈ ವೇಳೆ ನಾಗರಹಾವು ಪ್ರತ್ಯಕ್ಷವಾಗಿತ್ತು. ಆಗ ಹಾವು ಸಾವನ್ನಪ್ಪಿತ್ತು.

ಕಣ್ಣಿಗೆ ಹಾವುಕಂಡರೂ ಉರಗ ತಜ್ಞ ಅಥವಾ ಅರಣ್ಯ ಇಲಾಖೆಯವರನ್ನು ಕರೆಯಿಸದೇ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಕಾಮಗಾರಿ ಮುಂದುವರಿಸಿದ್ದಾರೆ. ಅವರ ನಿರ್ಲಕ್ಷ್ಯದಿಂದಾಗಿ ಹಾವು ಸಾವನ್ನಪ್ಪಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯ ರಾಹುಲ್ ಬಿದರೆ ಮತ್ತು ತಂಡದವರು ಸ್ಮಾರ್ಟ್‌ ಸಿಟಿ ಎಂಜಿನಿಯರ್ ಎ. ವಿವಿಜಯ್ ಕುಮಾರ್ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT