ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪದಲ್ಲಿ ಗೋಡೆ ಬರಹ: ಪಿಎಫ್‌ಐ ವಿರುದ್ಧ ಈಶ್ವರಪ್ಪ ಆಕ್ರೋಶ

-
Last Updated 5 ಡಿಸೆಂಬರ್ 2022, 4:29 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಗೋಡೆ ಬರಹ ಬರೆಯುವವರು ಹೇಡಿಗಳು. ಪಿಎಫ್‌ಐನವರು ಮುಂದಿನಿಂದ ಬಂದು ಏನೂ ಮಾಡಲ್ಲ. ರಾತ್ರಿ ಹೊತ್ತು ಬಂದು ಒಬ್ಬರೇ ಇರುವ ಸಂದರ್ಭದಲ್ಲಿ ಕೊಲೆ ಮಾಡುತ್ತಾರೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶಿರಾಳಕೊಪ್ಪದಲ್ಲಿ ಸಿಎಫ್‌ಐ ಹೆಸರಲ್ಲಿ ಗೋಡೆ ಬರಹ ಬರೆದಿರುವ ಬಗ್ಗೆ ಭಾನುವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ರಾತ್ರಿ ಬಂದು ಚಾಕು ಹಾಕುವುದು, ಬಾಂಬ್ ಹಾಕುವುದು ಮಾಡಿ ತಪ್ಪಿಸಿಕೊಳ್ಳೋದು. ರಾತ್ರಿ ಹೊತ್ತು ಪೊಲೀಸರ ಕಣ್ತಪ್ಪಿಸಿ, ಓಡಾಡೋದು. ಇದನ್ನೇ ಅವರು ಮಾಡೋದು’ ಎಂದರು.

‘ದೇಶದಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆರಂಭದಿಂದಲೂ ಈ ರೀತಿ ಹೇಡಿ ಕೆಲಸವನ್ನು ಪಿಎಫ್‌ಈ ಮಾಡುತ್ತಿದೆ. ದೇಶದಲ್ಲಿ ಪಿಎಫ್‌ಐ ಸಂಘಟನೆಯನ್ನು ಕಾಂಗ್ರೆಸ್ ಪೋಷಿಸಿಕೊಂಡು ಬರುತ್ತಿತ್ತು. ದೇಶದ ಬಗ್ಗೆ ಪಿಎಫ್‌ಐಗೆ ಕಲ್ಪನೆಯೇ ಇಲ್ಲ. ಅಭಿವೃದ್ಧಿ ಬಗ್ಗೆ ಕಲ್ಪನೆಯೇ ಇಲ್ಲ. ಭಾರತದಲ್ಲಿನ ಹಿಂದುತ್ವ ಅಳಿಸಬೇಕು ಎಂದು ಪಿಎಫ್‌ಐ ದೇಶದ್ರೋಹಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ನರೇಂದ್ರ‌ಮೋದಿ, ಅಮಿತ್ ಷಾ ಅಂತಹ ಹುಲಿಗಳು, ಇಲಿಗಳ ರೂಪದಲ್ಲಿರುವ ಪಿಎಫ್‌ಐ ಸಂಘಟನೆಯನ್ನು ಹೊಸಕಿ ಹಾಕಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT