ಶಿವಮೊಗ್ಗ: ನವಜಾತ ಶಿಶು ಸೇರಿ ಚಿಕ್ಕ ಮಕ್ಕಳಲ್ಲಿನ ಕಿವುಡುತನ ಪತ್ತೆ ಮಾಡಿ ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಅತ್ಯಂತ ದುಬಾರಿ ಆದ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

2023ರ ಮಾರ್ಚ್ 1ರಿಂದ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಆರಂಭಿಸಲಾಗಿದ್ದು, ಗುರುವಾರ 25ನೇ ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಅದರ ನೆನಪಿಗೆ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಪತ್ರೆಯ ಇ ಆ್ಯಂಡ್ ಟಿ ವಿಭಾಗದ ಮುಖ್ಯಸ್ಥ ಡಾ.ಎಸ್.ಶ್ರೀಧರ್, ರಾಜ್ಯ ಸರ್ಕಾರದ ಶ್ರವಣ ಸಂಜೀವಿನಿ ಕೋಕ್ಲಿಯರ್ ಇಂಪ್ಲಾಂಟ್ ಯೋಜನೆಯಡಿ ಬಿಪಿಎಲ್ ಅಥವಾ ಎಪಿಎಲ್ ಎಂಬ ಭೇದವಿಲ್ಲದೇ ಯಾವುದೇ ಕುಟುಂಬ ಉಚಿತವಾಗಿ ಈ ಚಿಕಿತ್ಸೆ ಮಾಡಿಸಬಹುದು. ಸಾರ್ವಜನಿಕರು ಈ ಅವಕಾಶ ಬಳಸಿಕೊಳ್ಳಬೇಕು. ಈ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ₹ 12ರಿಂದ ₹ 15 ಲಕ್ಷದಷ್ಟು ವೆಚ್ಚವಾಗುತ್ತದೆ ಎಂದು ಅವರು ಹೇಳಿದರು.

ಪ್ರತೀ 1,000 ಮಕ್ಕಳಲ್ಲಿ 5 ಮಕ್ಕಳಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಿವಿಯ ನರದಲ್ಲಿನ ದೋಷದಿಂದ ಅವರಿಗೆ ಕಿವುಡುತನ ಬರುತ್ತದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಚಿಕಿತ್ಸೆ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ. ಮಗು ಹುಟ್ಟಿದ ನಂತರ ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವ ಮುನ್ನವೇ ಅದರ ಶ್ರವಣ ಸಾಮರ್ಥ್ಯವನ್ನು ಪಾಲಕರು ಖಚಿತಪಡಿಸಿಕೊಳ್ಳಬೇಕು. ಮಗು ಮಾತು ಕಲಿಯಲು ವಿಳಂಬ ಮಾಡಿದಾಗಲೂ ಈ ತೊಂದರೆ ಇರಬಹುದು. ಆಗ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಇದ್ದರೆ ಚಿಕಿತ್ಸೆಗೆ ಮುಂದಾಗಬೇಕು ಎಂದರು.

‘ಈ ಯೋಜನೆಯಡಿ ಕಿವಿಯೊಳಗೆ ಅಳವಡಿಕೆಗೆ (ಇಂಪ್ಲಾಂಟ್) ಅತಿ ಸೂಕ್ಷ್ಮ ಸಾಧನದ ವೆಚ್ಚಕ್ಕಾಗಿ ₹ 6 ಲಕ್ಷ ಹಾಗೂ ಶಸ್ತ್ರಚಿಕಿತ್ಸೆ ಮತ್ತು ನಂತರದ ಚಿಕಿತ್ಸೆಗೆ ₹ 1.75 ಲಕ್ಷ ಸೇರಿದಂತೆ ಪ್ರತೀ ರೋಗಿಗೆ ರಾಜ್ಯ ಸರ್ಕಾರ ₹ 7.75 ಲಕ್ಷ ವ್ಯಯಿಸಲಾಗುತ್ತಿದೆ. ಈ ಚಿಕಿತ್ಸೆಯ ನಂತರ ಬಹುತೇಕ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಮತ್ತು ಮಾತಿನ ಕೌಶಲ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ’ ಎಂದು ಡಾ.ಶ್ರೀಧರ್ ಮಾಹಿತಿ ನೀಡಿದರು.

‘ಸಮುದಾಯ ಆರೋಗ್ಯ ಕೇಂದ್ರಗಳು, ಎನ್ಐಸಿಯು, ಎಸ್ಎನ್ಸಿಯು, ಮಕ್ಕಳ ಆಸ್ಪತ್ರೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಆಶಾ, ಎಎನ್ಎಂ, ಆರ್ಬಿಎಸ್ಕೆ ಹಾಗೂ ಎನ್ಪಿಪಿಸಿಡಿ ತಂಡಗಳು ಶ್ರವಣ ತಪಾಸಣೆ ನಡೆಸುತ್ತಿವೆ. ಇಲ್ಲಿ ಶ್ರವಣ ಸಮಸ್ಯೆ ಕಂಡು ಬಂದ ಮಕ್ಕಳನ್ನು ಜಿಲ್ಲಾ ಮಟ್ಟದ ಕೋಕ್ಲಿಯರ್ ಇಂಪ್ಲಾಂಟ್ ಸಮಿತಿಯ ಗಮನಕ್ಕೆ ತರಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಮೆಂಟರ್ ಸರ್ಜನ್ ಆಗಿ ಹಿರಿಯರಾದ ಡಾ. ಶಂಕರ್ ಮೆಡಕೇರಿ ಮಾರ್ಗದರ್ಶನ ನೀಡಿದ್ದಾರೆ’ ಎಂದು ಸ್ಮರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಗೀತಾ ಸುಶೀಲ್ ಕುಮಾರ್, ಇಎನ್ಟಿ ವಿಭಾಗದ ಡಾ.ಚಂಪಾ, ಶುಶ್ರೂಷಕಾಧೀಕ್ಷಕಿ ಶೇಷಮ್ಮ ಹಾಜರಿದ್ದರು.

ಮೆಗ್ಗಾನ್ ಆಸ್ಪತ್ರೆ ವ್ಯಾಪ್ತಿಯ ದಾವಣಗೆರೆ ಚಿತ್ರದುರ್ಗ ಚಿಕ್ಕಮಗಳೂರು ಜಿಲ್ಲೆಗಳ ಪಾಲಕರು ತಮ್ಮ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
– ಡಾ.ಎಸ್.ಶ್ರೀಧರ್, ಇ&ಟಿ ವಿಭಾಗದ ಮುಖ್ಯ ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ

‘ಚಿಕಿತ್ಸೆ ಪಡೆದು ಬದುಕು ಕಟ್ಟಿಕೊಂಡರು’

‘ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮೂಲಕ ಶ್ರವಣ ಶಕ್ತಿ ಮರಳಿ ಪಡೆದಿರುವ ಮಕ್ಕಳು ಇಂದು ಐಐಟಿಯಲ್ಲಿ ಕಲಿಯುತ್ತಿದ್ದಾರೆ. ವೈದ್ಯರು ವಕೀಲರೂ ಆಗಿದ್ದಾರೆ. ಈ ಚಿಕಿತ್ಸೆಯ ನಂತರ ಮಕ್ಕಳು ಸಹಜ ಜೀವನಕ್ಕೆ ಮರಳುತ್ತಾರೆ. ದುಬಾರಿ ವೆಚ್ಚದ ಕಾರಣ ಇಲ್ಲಿಯವರೆಗೂ ಪಾಲಕರು ಶಸ್ತ್ರಚಿಕಿತ್ಸೆ ಮಾಡಿಸುತ್ತಿರಲಿಲ್ಲ. ಈಗ ಸರ್ಕಾರ ಉಚಿತವಾಗಿ ಚಿಕಿತ್ಸೆ ಸೌಲಭ್ಯ ಕಲ್ಪಿಸಿರುವುದರಿಂದ ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಹಿರಿಯ ಶಸ್ತ್ರಚಿಕಿತ್ಸಕ ಶಂಕರ್ ಮೆಡಕೇರಿ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.