ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬ್ಯಾಂಕ್‌ನಲ್ಲಿ ಬೆಂಕಿ ಅವಘಡ; ₹ 4.5 ಲಕ್ಷ ಹಾನಿ

Last Updated 29 ನವೆಂಬರ್ 2021, 6:18 IST
ಅಕ್ಷರ ಗಾತ್ರ

ಶಿವಮೊಗ್ಗ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವಿದ್ಯಾನಗರ ಶಾಖೆಯಲ್ಲಿ ಭಾನುವಾರ ಶಾರ್ಟ್‌ ಸರ್ಕೀಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಪಿಠೋಪಕರಣ, ದಾಖಲೆಗಳು ಸುಟ್ಟು ಹೋಗಿವೆ.

ಬ್ಯಾಂಕ್‌ನ ಯುಪಿಎಸ್‌ ಬ್ಯಾಟರಿಗಳಲ್ಲಿ ಶಾರ್ಟ್‌ ಸರ್ಕೀಟ್‌ ಸಂಭವಿಸಿರುವ ಸಾಧ್ಯತೆ ಇದೆ. ಇದರಿಂದ ಕ್ಯಾಷ್‌ ಕೌಂಟರ್‌ ಸಂಪೂರ್ಣ ಸುಟ್ಟು ಹೋಗಿದೆ. ಇದೇ ಭಾಗದಲ್ಲಿ ಇರಿಸಿದ್ದ ಕೆಲ ದಾಖಲೆಗಳೂ ಹಾನಿಗೀಡಾಗಿವೆ ಎಂದು ತಿಳಿದು ಬಂದಿದೆ.

₹ 4.5 ಲಕ್ಷ ನಷ್ಟ: ಬೆಂಕಿ ಅವಘಡದಿಂದ ಸುಮಾರು ₹ 4.5 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ. 6 ಕಂ‍ಪ್ಯೂಟರ್‌, 8 ಕ್ಯಾಮೆರಾ, 6 ಪ್ರಿಂಟರ್‌, ಎಸಿ, ಸಿಸಿಟಿವಿ ಕ್ಯಾಮೆರಾ, ಹಣ ಎಣಿಕೆ ಯಂತ್ರ, ಸ್ಕ್ಯಾನರ್‌, ಫ್ಯಾನ್‌, ಪೀಠೋಪಕರಣ, ಆರು ಸ್ಪೀಕರ್‌ಗಳು, ರಿಜಿಸ್ಟರ್‌ಗಳು, ವೈರಿಂಗ್‌ ಸೇರಿ ಹಲವು ವಸ್ತುಗಳು ಹಾನಿಗೀಡಾವೆ. ಭಾನುವಾರ ಬ್ಯಾಂಕ್‌ಗೆ ರಜೆ ಇದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿ ಅವಘಡ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಬ್ಯಾಂಕ್‌ ಬಳಿ ಜಮಾಯಿಸಿದ್ದರು. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT