ಅಗ್ನಿ ಆಕಸ್ಮಿಕ: ಮೂರು ಕಾರುಗಳು ಭಸ್ಮ
ಶಿವಮೊಗ್ಗ: ವಿನೋಬನಗರ ಆಟೊ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಮೂರು ಕಾರುಗಳು ಆಹುತಿಯಾಗಿವೆ. ಒಂದು ಭಾಗಶಃ ಸುಟ್ಟುಹೋಗಿದೆ.
ಕೆಐಎಡಿಬಿ ಅಭಿವೃದ್ಧಿಪಡಿಸಿದ ಆಟೊ ಕಾಂಪ್ಲೆಕ್ಸ್ ಇದುವರೆಗೂ ನಗರ ಪಾಲಿಕೆಗೆ ಹಸ್ತಾಂತರ ಆಗಿಲ್ಲ. ಅಲ್ಲಿನ ಹಲವು ಮಾಲೀಕರು ತ್ಯಾಜ್ಯ ವಸ್ತುಗಳನ್ನು ಒಂದನೇ ತಿರುವಿನ ಖಾಲಿ ಜಾಗದಲ್ಲಿ ತಂದು ಸುರಿಯುತ್ತಾರೆ. ಸುತ್ತಲೂ ಗಿಡಗಳು ಬೆಳೆದಿವೆ. ಈ ಕಸಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಪಕ್ಕದಲ್ಲೇ ಇದ್ದ ಗ್ಯಾರೇಜ್‌ಗಳಿಗೆ ಹಬ್ಬಿದೆ. ಅಗ್ನಿಶಾಮಕ ಸೇವೆಯ ಅಧಿಕಾರಿಗಳು ಸಕಾಲಕ್ಕೆ ಬಂದು ಹೆಚ್ಚಿನ ಅನಾಹುತ ತಪ್ಪಿಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.