ಶಿವಮೊಗ್ಗ: ನಾವೆಲ್ಟಿಸ್ ಕಟ್ಟಡದಲ್ಲಿ ಬೆಂಕಿ ದುರಂತ

ಶಿವಮೊಗ್ಗ: ಇಲ್ಲಿನ ಗಾಂಧಿ ಬಜಾರ್ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿಯ ಮಾತೃಶ್ರೀ ನಾವೆಲ್ಟಿಸ್ ಕಟ್ಟಡ ಶನಿವಾರ ತಡರಾತ್ರಿ ಅಗ್ನಿಗೆ ಆಹುತಿಯಾಗಿದೆ.
ಅಂಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಸ್ಮೆಟಿಕ್ ಸಾಮಗ್ರಿಗಳು ಇದ್ದವು ಎನ್ನಲಾಗಿದೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ನಾಶವಾಗಿವೆ.
ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹತ್ತಿರಬಹುದು ಎಂದು ಅಗ್ನಿ ಶಾಮಕ ಸೇವೆಯ ಸಿಬ್ಬಂದಿ ತಿಳಿಸಿದರು.
ಬೆಂಕಿಯ ಜ್ವಾಲೆಗಳು ಅಲ್ಕಪಕ್ಕದ ಮಳಿಗೆಗಳಿಗೆ ಬಡಿದರೂ ಯಾವುದೇ ಅಪಾಯವಾಗಿಲ್ಲ. ರಾತ್ರಿವೇಳೆಯಾದ ಕಾರಣ ಜೀವಗಳಿಗೂ ಹಾನಿಯಾಗಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.