ಸೊರಬ: ಅಪಾರ ಜನಪದ ಸಂಪತ್ತನ್ನು ಹೊಂದಿರುವ ಸೊರಬ ತಾಲ್ಲೂಕಿನಲ್ಲಿ ಪುನಃ ಕಲೆಯು ಅನಾವರಣಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ ಹೇಳಿದರು.

ತಾಲ್ಲೂಕಿನ ಗುಂಜನೂರಿನಲ್ಲಿ ಆಯೋಜಿಸಿದ್ದ ಬಯಲಾಟ ಕಾರ್ಯಕ್ರಮದಲ್ಲಿ ಕಜಾಪ ವತಿಯಿಂದ ಹಿರಿಯ ಬಯಲಾಟ ಕಲಾವಿದರಿಗ ಸನ್ಮಾನ ನೀಡಿ ಅವರು ಮಾತನಾಡಿದರು.

ದೂರದರ್ಶನ, ಮೊಬೈಲ್ ಹಾವಳಿಯ ನಡುವೆಯೂ ಸತತ 50 ಪ್ರದರ್ಶನ ನೀಡಿ ಜನಪದ ಕಲೆಯನ್ನು ಜೀವಂತವಿರಿಸಿದ ಗುಂಜನೂರು ಗ್ರಾಮದ ಕಲಾಭಿಮಾನಿಗಳಿಗೆ ಕರ್ನಾಟಕ ಜನಪದ ಪರಿಷತ್ತು ನಮನಗಳನ್ನು ಸಲ್ಲಿಸುತ್ತದೆ. ಜನಪದ ಕಲೆ ಮುಂದಿನ ಪೀಳಿಗೆಗೆ ಪಸರಿಸುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ಊರಿಂದ ಊರಿಗೆ ಜನಪದ ನಡಿಗೆಯ ಶೀರ್ಷಿಕೆಯಡಿ ಕಜಾಪ ತಾಲ್ಲೂಕು ಘಟಕ ಕಾರ್ಯನಿರ್ವಹಿಸುತ್ತಿದ್ದು, ಜನಪದ ಕಲೆಯ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಕಜಾಪ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದರು.

ಗುಂಜನೂರಿನ ಶನೇಶ್ವರ ದೇವರ 44ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶನೇಶ್ವರ ಯುವಕ ಸಂಘದವರು ರಾಜಾ ವಿಕ್ರಮನ ಸತ್ವ ಪರೀಕ್ಷೆ ಎಂಬ ಬಯಲಾಟವನ್ನು ಪ್ರದರ್ಶಿಸಿದರು.

ಹಿರಿಯ ಕಲಾವಿದರಾದ ಭಾಗವತ ಶ್ರಾಮಚಂದ್ರಪ್ಪ ಜಾಣೆ, ಶನಿ ದೇವರ ಪಾತ್ರಧಾರಿ ನಾಗಿ ಬಸಪ್ಪ, ಗುರುಗಳಾದ ಸುಭಾಷ್ ಪಾಟೀಲ್, ಸಾರಥಿಯಾದ ಹನುಮಂತಪ್ಪ ಕೆ, ಶೆಟ್ಟಿ ಪಾತ್ರದಲ್ಲಿ ನಾರಾಯಣಪ್ಪ ಎಚ್, ಅವರನ್ನು ಗೌರವಿಸಲಾಯಿತು.

ಕಜಾಪ ಕೋಶಾಧಿಕಾರಿ ಮೋಹನ ಸುರಭಿ, ಸದಸ್ಯ ರಾಘವೇಂದ್ರ ಅಂದವಳ್ಳಿ, ಶಿವಮೂರ್ತಿ ಎಚ್.ಕೆ, ಗಿರೀಶ, ಗಂಗಾಧರ್, ಯಂಕಪ್ಪ ಮತ್ತು ಗುಂಜನೂರು ಗ್ರಾಮಸ್ಥರು, ಕಲಾವಿದರು ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.