ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ | ಅರಣ್ಯ ಇಲಾಖೆ ಕಾರ್ಯಾಚರಣೆ: 25 ಹೆಕ್ಟೇರ್ ಪ್ರದೇಶ ವಶಕ್ಕೆ

Published : 10 ಸೆಪ್ಟೆಂಬರ್ 2024, 13:44 IST
Last Updated : 10 ಸೆಪ್ಟೆಂಬರ್ 2024, 13:44 IST
ಫಾಲೋ ಮಾಡಿ
Comments

ಭದ್ರಾವತಿ: ತಾಲ್ಲೂಕಿನ ಭೈರುಕ್ಯಾಂಪ್ ಬೇಚಾರ್ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮನೆ ಮತ್ತು ಅಂಗಡಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಸುಮಾರು 25 ಹೆಕ್ಟೇರ್ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಆಶಿಶ್ ರೆಡ್ಡಿ ಮತ್ತು ಚನ್ನಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಬಿ.ಎಚ್.ದುಗ್ಗಪ್ಪ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಣ್ಣನಾಯ್ಕ, ಪಿ.ಕೆ.ಟೀಕೇಶ್ವರ್, ಹನುಮಂತ ನಾಯ್ಕ, ಶೇಖರ್ ಚೌಗಲೆ ಹಾಗೂ ಗಸ್ತು ವನಪಾಲಕರಾದ ಪಿ.ರಾಬರ್ಟ್‌, ಎನ್.ಅರವಿಂದ ಕುಮಾರ್, ಬಿ.ಶ್ರೀಧರ, ಚಂದ್ರಶೇಖರ್, ಕಾಂತೇಶ್ ನಾಯ್ಕ, ಅವಿನಾಶ್ ಮತ್ತು ಅರಣ್ಯ ವೀಕ್ಷಕರಾದ ರಂಗಸ್ವಾಮಿ, ಗಫರ್, ಮಲ್ಲಿಕಾರ್ಜುನ, ಬಾಗೇಶ, ಕೂಠಿ, ಅವಿನಾಶ್, ಅಬ್ದುಲ್, ಸುರೇಶ, ವಿನಯ್, ವೆಂಕಟೇಶ್, ರಘು, ಹನುಮಂತ, ಬರ್ಮ, ಚನ್ನಗಿರಿ ಅರಣ್ಯ ಸಂಚಾರದಳ ಮತ್ತು ಪೂಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT