ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ: 29 ಎಕರೆ ಅರಣ್ಯ ಒತ್ತುವರಿ ತೆರವು

Published 8 ಆಗಸ್ಟ್ 2024, 16:07 IST
Last Updated 8 ಆಗಸ್ಟ್ 2024, 16:07 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ತಾಲ್ಲೂಕಿನಲ್ಲಿ 7 ಕಡೆಗಳ ಒಟ್ಟು 29 ಎಕರೆ ಅರಣ್ಯ ಒತ್ತುವರಿಯನ್ನು ಗುರುವಾರ ಅರಣ್ಯ ಇಲಾಖೆ ತೆರವುಗೊಳಿಸಿದೆ.

ಆಗುಂಬೆ ವಲಯಾರಣ್ಯ ವ್ಯಾಪ್ತಿಯ ಆಲಗೇರಿ, ಬಿದರಗೋಡು ಗ್ರಾಮದಲ್ಲಿ ಒಟ್ಟು 2 ಪ್ರಕರಣದ 13.24 ಎಕರೆ, ಮಂಡಗದ್ದೆ ವಲಯಾರಣ್ಯ ವ್ಯಾಪ್ತಿಯ ಕುಡುವಳ್ಳಿ ಗ್ರಾಮದ 6 ಎಕರೆ, ತೀರ್ಥಹಳ್ಳಿ ವಲಯಾರಣ್ಯ ವ್ಯಾಪ್ತಿಯ ಭಾರತೀಪುರ, ಮೇಲಿನಕುರುವಳ್ಳಿ ಗ್ರಾಮದ 3 ಸ್ಥಳದಲ್ಲಿ ಒಟ್ಟು 7.20 ಎಕರೆ, ಆಯನೂರು ವಲಯಾರಣ್ಯ ವ್ಯಾಪ್ತಿಯ ಗುಂಡಿಚಟ್ನಳ್ಳಿ ಗ್ರಾಮದ 2 ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.

ತೆರವು ಕಾರ್ಯಾಚರಣೆ ವೇಳೆ ಗ್ರಾಮಸ್ಥರ ವಿರೋಧ ವ್ಯಕ್ತವಾಯಿತು. ಅರಣ್ಯ ಇಲಾಖೆ ಒತ್ತುವರಿ ತೆರವುಗೊಳಿಸಿ ವಶಪಡಿಸಿಕೊಂಡ ಜಾಗದಲ್ಲಿ ಜೆಸಿಬಿ ಮೂಲಕ ಕಂದಕ ನಿರ್ಮಿಸಲಾಗಿದೆ. ಕಂದಕದ ಆಜುಬಾಜಿನಲ್ಲಿ ಕಾಡು ಜಾತಿಯ ಸಸಿಗಳನ್ನು ನಾಟಿ ಮಾಡಲಾಗಿದೆ.

ಒತ್ತುವರಿ ತೆರವು ಸ್ಥಳಕ್ಕೆ ಡಿಸಿಎಫ್‌ಒ ಶಿವಶಂಕರ್‌ ಇ. ಭೇಟಿ ನೀಡಿ ಪರಿಶೀಲಿಸಿದರು. ಎಸಿಎಫ್‌ ದಿನೇಶ್‌‌ ಎಸ್.ಒ, ತೀರ್ಥಹಳ್ಳಿ ವಲಯಾರಣ್ಯಾಧಿಕಾರಿ ಸಂಜಯ್‌ ಬಿ.ಎಸ್, ಮಂಡಗದ್ದೆ ವಲಯಾರಣ್ಯಾಧಿಕಾರಿ ಎಂ.ಪಿ. ಆದರ್ಶ, ಆಗುಂಬೆ ವಲಯಾರಣ್ಯಾಧಿಕಾರಿ ಮಧುಕರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಹಂಗಮ ರೆಸಾರ್ಟ್‌ ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಿಸಿರುವುದು
ವಿಹಂಗಮ ರೆಸಾರ್ಟ್‌ ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಒತ್ತುವರಿ ಪ್ರದೇಶ ತೆರವುಗೊಳಿಸಿದರುವುದು
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಒತ್ತುವರಿ ಪ್ರದೇಶ ತೆರವುಗೊಳಿಸಿದರುವುದು

ವಿಹಂಗಮ ರೆಸಾರ್ಟ್‌ ಒತ್ತುವರಿ ತೆರವು

ಇಲ್ಲಿನ ಭಾರತೀಪುರ ಗ್ರಾಮದ ಸರ್ವೆ ನಂ. 81ರ ಭಾರತೀಪುರ ಕಿರು ಅರಣ್ಯ ಪ್ರದೇಶದಲ್ಲಿ ಕೆ.ಆರ್.‌ ದಯಾನಂದ ಕಾನೀನ ಕಡಿದಾಳ್‌ ಅವರು ಅಕ್ರಮವಾಗಿ ಕಲ್ಲುಕಂಬ ತಂತಿ ಬೇಲಿ ನಿರ್ಮಿಸಿ ಅಡಿಕೆ ಕಾಫಿ ಇನ್ನಿತರೆ ಬೆಳೆ ಬೆಳೆದು ಮನೆ ಮತ್ತು ಇತರೆ ಕಟ್ಟಡ ನಿರ್ಮಿಸಿ ಕಾನೂನು ಬಾಹಿರ ಒತ್ತುವರಿ ಮಾಡಿಕೊಂಡಿದ್ದರು. ಡಿಸಿಎಫ್‌ಒ ನೇತೃತ್ವದಲ್ಲಿ ವಿಹಂಗಮ ಹಾಲಿಡೇ ರೆಸಾರ್ಟ್‌ ಪ್ರದೇಶದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಜಾಗವನ್ನು ಸಪರ್ದಿಗೆ ಪಡೆದಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಒತ್ತುವರಿದಾರರು ಕಟ್ಟಡಗಳಿಗೆ ಪಟ್ಟಣ ಪಂಚಾಯಿತಿಯಿಂದ ಭೂ– ಭೂಪರಿವರ್ತನೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು ದಾಖಲೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಮುಂದಿನ ಹಂತದ ಕಾರ್ಯಚರಣೆ ಕೈಗೊಳ್ಳಲು ಒತ್ತುವರಿದಾರರ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 64(ಎ) ಅಡಿಯಲ್ಲಿ ನೋಟೀಸ್‌ ಜಾರಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT