ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒತ್ತುವರಿ ತೆರವು ವಿಚಾರವಾಗಿ ರೈತನ ಮೇಲೆ ಅರಣ್ಯಾಧಿಕಾರಿ ಹಲ್ಲೆ: ಗ್ರಾಮಸ್ಥರ ಆರೋಪ

Published : 21 ಸೆಪ್ಟೆಂಬರ್ 2024, 15:37 IST
Last Updated : 21 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಹೊಳೆಹೊನ್ನೂರು: ‘ಸಮೀಪದ ಗುಡುಮಘಟ್ಟೆಯಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ರೈತರೊಬ್ಬರ ಮೇಲೆ ಅರಣ್ಯಾಧಿಕಾರಿ ಹಲ್ಲೆ ಮಾಡಿದ್ದಾರೆ‘ ಎಂದು ಆರೋಪಿಸಿ ಗ್ರಾಮಸ್ಥರು ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

4 ದಿನಗಳಿಂದ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ವಿಚಾರವಾಗಿ ಭದ್ರಾವತಿ ಆರ್‌ಎಫ್‌ಒ ದುಗ್ಗಪ್ಪ ಗುಡುಮಗಟ್ಟೆಯ ಭೋವಿ ಹನುಮಂತಪ್ಪನ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಒತ್ತುವರಿ ನಡೆಯುತ್ತಿದ ಸ್ಥಳಕ್ಕೆ ದಾವಿಸಿ ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ರೈತರು ಅರಣ್ಯಾಧಿಕಾರಿಗಳ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಗ್ರಾಮದ ಮುಖಂಡರು ಸಮಾಧಾನ ಪಡಿಸಿದರು. ಬಳಿಕ ಅರಣ್ಯಾಧಿಕಾರಿ ಅಲ್ಲಿಂದ ತೆರಳಿದರು.

‘ಪ್ರಭಾವಿಗಳನ್ನು ಬಿಟ್ಟು ಸಾಗುವಳಿ ಪತ್ರ ಇದ್ದರೂ ಚಿಕ್ಕ ರೈತರ ಜಮೀನುಗಳನ್ನು ಅರಣ್ಯಾಧಿಕಾರಿಗಳು ತೆರವು ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT