ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಲ ಶಿಕ್ಷಣ ಪರಿಕಲ್ಪನೆ ಗಾಂಧೀಜಿ ‌ಕೊಡುಗೆ’

ಕೈದಿಗಳಿಗೆ ಕಲಿಕಾ ಉಪಕರಣಗಳ ವಿತರಿಸಿ ಗಾಂಧಿ ಜಯಂತಿ
Last Updated 3 ಅಕ್ಟೋಬರ್ 2022, 4:52 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಹಾತ್ಮ ಗಾಂಧೀಜಿ ಅವರ ಆಶಯಗಳನ್ನು ಕೈದಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ವಯಸ್ಕರ ಶಿಕ್ಷಣ ಎರಡನೇ ಹಂತದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣನವರ್, ‘ಮೂಲ ಶಿಕ್ಷಣ ಪರಿಕಲ್ಪನೆಯು ಭಾರತೀಯ ಸಮಾಜಕ್ಕೆ ಗಾಂಧೀಜಿ ಅವರು ನೀಡಿದ ಮಹಾನ್‌ ಕೊಡುಗೆಗಳಲ್ಲೊಂದು. ಗಾಂಧೀಜಿ ಅವರ ಶಿಕ್ಷಣ, ತತ್ವ–ಚಿಂತನೆಗಳಿಂದ ಕಾರಾಗೃಹಗದ ಬಂಧಿಗಳಿಗೆ ಕಲಿಕೆ ಮತ್ತು ಮನಃ ಪರಿವರ್ತನೆಗೆ ಉತ್ತಮ ‍ಪ್ರೇರಣೆ ದೊರಕುವಂತಾಗಲಿ’ ಎಂದು ಆಶಿಸಿದರು.

ದೃಢ ಸಂಕಲ್ಪದಿಂದ ಮಾತ್ರ ಪರಿವರ್ತನೆ ಸಾಧ್ಯ. ಕಾರಾಗೃಹಗಳಲ್ಲಿ ಅನಕ್ಷರಸ್ಥ ಹಾಗೂ ಅರೆ ಅಕ್ಷರಸ್ಥ ಬಂಧಿಗಳ ಮನ ಪರಿವರ್ತನೆಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್‌.ಅನಿತಾ ಹೇಳಿದರು.

ಬಂಧಿಗಳ ಬದುಕಿಗೆ ನವಚೇತನ ನೀಡಲು ಕಲಿಕೆ ಅಗತ್ಯ. ಬದಲಾವಣೆಯ ಮನೋಭಾವದಿಂದ ಸುಧಾರಣೆ ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹೇಳಿದರು.

ಕೈದಿಗಳಿಗೆ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಕೈದಿಗಳು ಗಾಂಧೀಜಿ ವಿಚಾರಗಳ ಕುರಿತು ಪ್ರಶ್ನೋತ್ತರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಅಧೀಕ್ಷಕಿ ಜಿ.ಹೇಮಾವತಿ, ಸಹಾಯಕ ಅಧೀಕ್ಷಕ ಶಿವಾನಂದ ಆರ್‌.ಶಿವಾಪುರ, ಜೈಲರ್‌ಗಳಾದ ಜಿ.ಎಂ.ಮಹೇಶ್‌, ಅನಿಲ್‌ಕುಮಾರ್‌ ಎಸ್‌, ಸುಷ್ಮಾ ವಡಗೇರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಿ.ಬಿ.ಜಯಪ್ಪ, ಕಾರ್ಯಕ್ರಮ ಸಂಯೋಜಕ ಎಚ್.ಎಸ್. ಪಾಟೀಲ, ಜೈಲರ್ ಸವಿತಾ ಬೆಳ್ಳುಂಡಗಿ ಇದ್ದರು.

ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ‘ಗಾಂಧೀಜಿ ಮಹಾತ್ಮರಾದರು’ ಕಿರು ಸಾಕ್ಷ್ಯಚಿತ್ರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT