ಶಿರಾಳಕೊಪ್ಪ: ಪಟ್ಟಣದ ಸೊರಬ ರಸ್ತೆಯ ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಸೊರಬ ರಸ್ತೆಯ ಸಭಾಮಂಟಪದಿಂದ ಆರಂಭವಾದ ಗಣಪತಿ ವಿಸರ್ಜನಾ ಮೆರವಣಿಗೆ ಆನವಟ್ಟಿ ಸರ್ಕಲ್, ಬಸ್ ಸ್ಟ್ಯಾಂಡ್ ವೃತ್ತ, ಶಿಕಾರಿಪುರ ರಸ್ತೆ, ಕುಂಬಾರಕೇರಿ, ಹೊಂಡದ ಆಂಜನೇಯ ದೇವಸ್ಥಾನ ಮುಂಭಾಗ, ಹಿರೆಕೇರೂರು ರಸ್ತೆ ಮಾರ್ಗವಾಗಿ ಕೆ.ಇ.ಬಿ ಕಚೇರಿ ಕಡೆಯಿಂದ ಬಸ್ ನಿಲ್ದಾಣದ ವೃತ್ತದಲ್ಲಿ ಸಮಾರೋಪಗೊಂಡಿತು.
ಮಂಗಳೂರು ಮತ್ತು ದಾವಣಗೆರೆಯ ನಾಸಿಕ್ ಡೋಲ್ ಕಲಾ ತಂಡಗಳು, ಪೇಪರ್ ಬ್ಲಾಸ್ಟ್, ಸಿಡಿಮದ್ದುಗಳ ಪ್ರದರ್ಶನ ಸೇರಿದಂತೆ ಯುವಕರಿಗಾಗಿ ಮಂಗಳೂರಿನ ಪಪ್ಪು ಡಿ.ಜೆ. ಹಾಗೂ ಮಹಿಳೆಯರಿಗಾಗಿ ಇದ್ದ ಶಿಕಾರಿಪುರದ ಮಿಥುನ್ ಡಿಜೆ ಹಾಡಿಗೆ ಸಾವಿರಾರು ಯುವಕ-ಯುವತಿಯರು, ಮಕ್ಕಳು, ಮಹಿಳೆಯರು ಕುಣಿದು ಸಂಭ್ರಮಿಸಿದರು.
ಯುವಕ ಮಲ್ಲಿಕಾರ್ಜುನ ಅವರ ಶಿವನ ವೇಷ ಗಮನ ಸೆಳೆಯಿತು. ಮೆರವಣಿಗಯಲ್ಲಿ ಸುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ರಾತ್ರಿ 10ರ ನಂತರವಡ್ಡಿನಕೆರೆಯಲ್ಲಿ ಗಣೇಶನ ಮೂರ್ತಿ ವಿಜರ್ಸನೆ ಮಾಡಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.