ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಭಾ ಗಣಪತಿ ಅದ್ಧೂರಿ ಮೆರವಣಿಗೆ

ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಬಿಗಿಬಂದೋಬಸ್ತ್
Last Updated 20 ಸೆಪ್ಟೆಂಬರ್ 2022, 2:50 IST
ಅಕ್ಷರ ಗಾತ್ರ

ಶಿಕಾರಿಪುರ: ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿಯ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೀರಗಾಸೆ, ಕೀಲುಗೊಂಬೆ ಕುಣಿತ, ಕುದುರೆ ಕುಣಿತ, ಡ್ರಮ್ ಸೆಟ್, ಡಿಜೆ ಸೌಂಡ್ ಸೇರಿ ವಿವಿಧ ಕಲಾಮೇಳಗಳೊಂದಿಗೆ ಸಂಚರಿಸಿತು. ಪಟ್ಟಣದ ತಾಲ್ಲೂಕು ಕಚೇರಿ ರಸ್ತೆ, ದೊಡ್ಡಕೇರಿ, ಶಿರಾಳಕೊಪ್ಪ ಸರ್ಕಲ್, ದೊಡ್ಡಪೇಟೆ, ಮಿಡ್ಲ್ ಸ್ಕೂಲ್ ರಸ್ತೆ ಹಾಗೂ ತೇರುಬೀದಿಯಲ್ಲಿ ಮಾರ್ಗದಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಡಿಜೆ ಸೌಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದರು.

ಅಯೋಧ್ಯೆ ಶ್ರೀರಾಮನ ಭಾವಚಿತ್ರ, ಹುಚ್ಚರಾಯಸ್ವಾಮಿ (ಆಂಜನೇಯ), ಭಗತ್ ಸಿಂಗ್, ಶಿವಾಜಿ ಮಹಾರಾಜ್, ವಿ.ಡಿ.ಸಾವರ್ಕರ್, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಭಾವಚಿತ್ರದ ಪ್ಲೆಕ್ಸ್‌ಗಳನ್ನು ಟ್ರ್ಯಾಕ್ಟರ್‌ನಲ್ಲಿ ಪ್ರದರ್ಶಿಸಿದರು. ವಿ.ಡಿ.ಸಾವರ್ಕರ್ ಭಾವಚಿತ್ರ ಹೊಂದಿದ ಕೇಸರಿ ಧ್ವಜವನ್ನು ಹಿಡಿದು ಯುವಕರು ಹೆಜ್ಜೆ ಹಾಕಿದರು. ರಾತ್ರಿ ಹುಚ್ಚರಾಯನ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ವಿಸರ್ಜನಾ ಮೆರವಣಿಗೆ ಪ್ರಯುಕ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT