ಹೊಳೆಹೊನ್ನೂರು: ‘ಪರಸ್ಪರ ಪರೋಪಕಾರ ಗುಣ ಬೆಳೆಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ’ ಎಂದು ಚನ್ನಗಿರಿ ಕೇದಾರ ಹಿರೇಮಠದ ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕಲ್ಲಿಹಾಳ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಆಂಜನೇಯಸ್ವಾಮಿ ನೂತನ ದೇವಾಲಯ ಪ್ರವೇಶ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಹಾಗೂ ಗರುಡಗಂಬ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ದೈವಾರಾಧನೆಯನ್ನು ಎಂದಿಗೂ ಕೈ ಬಿಡಬಾರದು. ಊರ ಹಬ್ಬ ಸೇರಿ ಸಂಭ್ರಮಾಚರಣೆಗಳು ಗ್ರಾಮದ ಒಗ್ಗಟ್ಟನ್ನು ತೋರಿಸುತ್ತವೆ’ ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದರು.

ಶಾಸಕ ಡಾ.ಧನಂಜಯ ಸರ್ಜಿ, ಎಚ್.ವಾಸು, ಎಚ್.ಎಲ್. ಷಡಾಕ್ಷರಿ, ಸಿ.ಹನುಮಂತು, ಅಜಯ್ ಕುಮಾರ್, ಆರ್.ಉಮೇಶ್, ಶ್ರೀನಿವಾಸ್ ಕರಿಯಣ್ಣ, ಆರ್.ಮಂಜುನಾಥ್, ಪಿ.ಎಚ್. ಚಂದ್ರಪ್ಪ, ಶಿವಕುಮಾರ್, ರುದ್ರಮುನಿ, ಹಾಲಪ್ಪ, ಕೃಷ್ಣಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-42-4193198

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.