ಹೊಳೆಹೊನ್ನೂರು: ‘ಭಾರತ ಎಂದರೆ ಮಠ– ಮಂದಿರಗಳ ಸಂಸ್ಕೃತಿ. ದೇಶದ ಜನ ದೇವರು, ಧರ್ಮ, ಗುರು, ಆಚಾರ ವಿಚಾರಗಳಿಗೆ ಹೆಚ್ಚು ಭಕ್ತಿ ಶ್ರದ್ಧೆಯನ್ನು ಅರ್ಪಣೆ ಮಾಡುತ್ತಾರೆ’ ಎಂದು ಉಜ್ಜಿನಿ ಮಹಾಸಂಸ್ಥಾನದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಎಮ್ಮೆಹಟ್ಟಿ ಗ್ರಾಮದ ಉಜ್ಜಿನಿ ಮರುಳ ಸಿದ್ದೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸೋಮವಾರ ನೂತನ ಕಲ್ಲಿನ ದೇವಾಲಯದ ಉದ್ಘಾಟನೆ, ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣದ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಪಾಶ್ಚಿಮಾತ್ಯ ದೇಶದ ಜನ ದೇವರಿಗಿಂತ ತಮ್ಮ ದೇಹವನ್ನು ಹೆಚ್ಚು ಪ್ರೀತಿಸುತ್ತಾರೆ. ಇಡೀ ಜಗತ್ತಿನಲ್ಲಿ ದೇವರಿಗಾಗಿ ಜಾತ್ರಾ ಮಹೋತ್ಸವ, ಪೂಜೆ, ಪುನಸ್ಕಾರ, ಉರುಳುಸೇವೆ, ಪಾದಯಾತ್ರೆ, ಉಪವಾಸ ಸೇರಿ ಹಲವು ಕಾರ್ಯಗಳನ್ನು ಮಾಡುವ ದೇಶವೆಂದರೆ ಭಾರತ. ಮಠ, ಮಂದಿರಗಳಿಂದಾಗಿ ದೇಶದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಿದೆ’ ಎಂದು ತಿಳಿಸಿದರು.

‘ದೇಶವನ್ನು ಭಾರತಾಂಬೆ ಎಂದು ಕರೆಯುವ ಮೂಲಕ ಹೆಣ್ಣಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹಿಂದಿನ ಕಾಲದಿಂದಲೂ ಮಹಿಳೆಯನ್ನು ತಾಯಿ ರೂಪದಲ್ಲಿ ನೋಡುವುದೇ ಭಾರತೀಯರ ಸಂಸ್ಕೃತಿ. ಮಹಿಳೆಯರಿಗೆ ಕಾನೂನಿಗಿಂತಲೂ ಹೆಚ್ಚಿನ ಮಹತ್ವವನ್ನು ಹಿಂದೂ ಸಮಾಜದಲ್ಲಿ ನೀಡಲಾಗುತ್ತಿದೆ. ದೇಶದಲ್ಲಿರುವ ಪ್ರತಿಯೊಂದು ನದಿಗೂ ಮಹಿಳೆಯರ ಹೆಸರು ಇಡಲಾಗಿದೆ’ ಎಂದು ಹೇಳಿದರು.

‘ಛತ್ರಪತಿ ಶಿವಾಜಿ ಮಹಾರಾಜರು ಒಂದು ಸಮಾಜಕ್ಕೆ ಸೀಮಿತರಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ದೇವಸ್ಥಾನಗಳನ್ನು ಉಳಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಪ್ರತಿಯೊಬ್ಬರೂ ಸಮಾಜದ ಸಂಘಟನೆಗೆ ಮುಂದಾಗಬೇಕು. ಧರ್ಮದ ಸಿದ್ಧಾಂತಗಳನ್ನು ನಡವಳಿಕೆಗೆ ತರಬೇಕಿದೆ. ತಳಮಟ್ಟದಲ್ಲಿ ಸಮಾಜವನ್ನು ಸದೃಢವಾಗಿಸುವುದು ನಾಯಕನ ಕೆಲಸ. ಸಮಾಜದಲ್ಲಿನ ಅಶಕ್ತರ ಕೈ ಬಲಪಡಿಸಬೇಕಿದೆ’ ಎಂದು ಬೆಂಗಳೂರಿನ ಗೋಸಾಯಿ ಮಠದ ಮರಾಠ ಮಂಜುನಾಥ ಭಾರತೀ ಸ್ವಾಮೀಜಿ ತಿಳಿಸಿದರು.

‘ಸಮಾಜದಲ್ಲಿ ಯುವಕರು ಹೆಚ್ಚಿನ ಒತ್ತಡದಿಂದಾಗಿ ಹಾಳಾಗುತ್ತಿದ್ದರೆ, ಇನ್ನೂ ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ದೇವಾಲಯಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳು. ಪ್ರತಿಯೊಬ್ಬರೂ ದಿನದಲ್ಲಿ 1 ಗಂಟೆಯಾದರೂ ದೇವಾಲಯಗಳಲ್ಲಿ ಕಾಲ ಕಳೆಯಬೇಕು’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ದೇವಾಲಯ ಉದ್ಘಾಟನೆ ಪ್ರಯುಕ್ತ ಉಜ್ಜಿನಿ ಮರುಳ ಸಿದ್ದೇಶ್ವರ ದೇವಸ್ಥಾನ ಸಮಿತಿ ಹಾಗೂ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಅಂದಾಜು 88 ಜನ ರಕ್ತದಾನ ಮಾಡಿದರು.

ಶಾಸಕಿ ಶಾರದಾ ಪೂರ್ಯಾನಾಯ್ಕ, ಮರಿಯೋಜಿರಾವ್, ಯಶವಂತರಾವ್ ಘೋರ್ಪಡೆ, ಶ್ರೀನಿವಾಸ ಕರಿಯಣ್ಣ, ಮಲ್ಲೇಶಪ್ಪ, ಆರ್. ಉಮೇಶ್, ಸಚಿನ್ ಸಿಂಧೆ, ದೇವೋಜಿರಾವ್, ಮುರಾರಿ ರಾವ್, ಕೃಷ್ಣಪ್ಪ, ಬಸವರಾಜ್ ಯು, ಮಲ್ಲೇಶರಾವ್ (ಕಗ್ಗಿ), ಪರಶುರಾಮ್, ತಿಪ್ಪೇಶಪ್ಪ, ಮಂಜುನಾಥ್, ನಾಗರಾಜ್, ಶೇಖರಪ್ಪ ಸೇರಿ ಎಮ್ಮೆಹಟ್ಟಿ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-42-1488858060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.