ರಿಪ್ಪನ್ಪೇಟೆ: ಸಮೀಪದ ಹೊಂಬುಜ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆರು ದಿನಗಳಿಂದ ನಡೆಯುತ್ತಿದ್ದ ವಿಜೃಂಭಣೆಯ ಮಹಾ ರಥೋತ್ಸವಕ್ಕೆ ಶನಿವಾರ ಧ್ವಜಾರೋಹಣ ಹಾಗೂ ಕುಂಕುಮೋತ್ಸವದ ಓಕಳಿಯೊಂದಿಗೆ ತೆರೆ ಬಿದ್ದಿತು.

ಮಠದ ಪೀಠಾಧೀಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಆರಾಧನೆಗಳು, ನಾಗವಾಹನೋತ್ಸವ, ಸಿಂಹವಾಹನೋತ್ಸವ, ಬೆಳ್ಳಿ ರಥೋತ್ಸವ, ಪುಷ್ಪರಥೋತ್ಸವ ಹಾಗೂ ಪುರೋಹಿತರಾದ ಪದ್ಮರಾಜ ಇಂದ್ರ ಮತ್ತು ಸಹಪುರೋಹಿತ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದರು.

ಪಲ್ಲಕ್ಕಿಯಲ್ಲಿ ಅವಭೃತ ಜಿನಬಿಂಬಗಳನ್ನು ನಗರದ ರಾಜಬೀದಿಯಿಂದ ಸಾಲಂಕೃತ ಶೋಭಾಯಾತ್ರೆಯಲ್ಲಿ ಜಿನಸ್ತುತಿಯೊಂದಿಗೆ ತರಲಾಯಿತು.

ಅಗ್ರೋದಕವನ್ನು ಕುಮದ್ವತಿ ತೀರ್ಥದಿಂದ ಸನ್ನಿಧಿಗೆ ಅರ್ಪಿಸಲಾಯಿತು. ಯಕ್ಷಿ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಶಾಸ್ತ್ರೋಕ್ತ ಪೂಜೆ ಸಲ್ಲಿಸಲಾಯಿತು. ಪದ್ಮಾವತಿ ಮಹಿಳಾ ಮಂಡಳ ಹಾಗೂ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರು ಕುಂಕುಮೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಿಸಿದರು.

ಮಹಾರಥೋತ್ಸವಕ್ಕೆ ಸಹಕರಿಸಿದ ಪೊಲೀಸರು, ಮೆಸ್ಕಾಂ, ಪಂಚಾಯತಿ, ಕಂದಾಯ, ಆರೋಗ್ಯ ಇಲಾಖೆ, ಗೃಹರಕ್ಷಕದಳ, ಸ್ವಯಂಸೇವಕರಿಗೆ ಮಠದ ಪರವಾಗಿ ಕಾರ್ಯನಿರ್ವಾಕರ ಅಧಿಕಾರಿ ಪ್ರಕಾಶ ನೇ. ಮಗದುಮ್ಮ ಹಾಗೂ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.