ಗೃಹ ಇಲಾಖೆ ನಿಷ್ಠುರದ ಖಾತೆ: ಆರಗ ಜ್ಞಾನೇಂದ್ರ

ಹೊಸನಗರ: ‘ಗೃಹ ಇಲಾಖೆ ನಿಷ್ಠುರದ ಖಾತೆ. ಪೊಲೀಸರ ವಿರುದ್ಧ ಎಷ್ಟು ನಿಷ್ಠುರವಾಗಿ ಮಾತನಾಡುತ್ತಾರೋ, ಗೃಹಸಚಿವರನ್ನೂ ಅಷ್ಟೇ ನಿಷ್ಠುರವಾಗಿ ನೋಡುತ್ತಾರೆ. ಆದರೆ, ನನಗೆ ನೀಡಿರುವ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ತಾಲ್ಲೂಕಿನ ಯಡೂರು ಮೆಕೇರಿಯಲ್ಲಿ ಈಶಾ ಕ್ರಿಕೆಟರ್ಸ್ ಭಾನುವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಮಾತನಾಡಿದರು.
‘ತೀರ್ಥಹಳ್ಳಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ನನಗೆ ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡರು ಉನ್ನತ ಗೃಹಖಾತೆ ನೀಡುವ ಮೂಲಕ ರಾಜ್ಯದ ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಎಷ್ಟೇ ಟೀಕೆ, ನಿಷ್ಠುರ ಮಾತುಗಳು ಬರಲಿ, ಸವಾಲಾಗಿ ಸ್ವೀಕರಿಸುತ್ತೇನೆ. ಕ್ಷೇತ್ರದ ಘನತೆಗೆ ಕುಂದು ಬಾರದಂತೆ ಕಾರ್ಯನಿರ್ವಹಿಸುತ್ತೇನೆ’ ಎಂದು ಹೇಳಿದರು. ಯುವ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಂಕ್ರಿಬೀಡು ಮಂಜುನಾಥ್, ವಾಟಗದ್ದೆ ದಿನೇಶ್, ಭಾಸ್ಕರ ಜೋಯ್ಸ್, ವೈ. ಶ್ರೀಧರ್, ಸತೀಶ ಯಡೂರು, ಹೆರಟೆ ಆದರ್ಶ, ಪಿಎಸ್ಐ ನಾಗರಾಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.