ಕಾರ್ಗಲ್ (ಶಿವಮೊಗ್ಗ): ಇಲ್ಲಿನ ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ವರ್ಷಾಂತ್ಯದ ವಾರದ ಕೊನೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಎರಡು ತಿಂಗಳಿನಿಂದ ಕೊರೊನಾ ಮತ್ತು ಹೊಸ ರೂಪಾಂತರ ತಳಿ ಓಮೈಕ್ರಾನ್ ಬಗ್ಗೆ ಇದ್ದ ಆತಂಕದ ಕಾರಣದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡುಬಂದಿತ್ತು. ಶನಿವಾರ ಮತ್ತು ಭಾನುವಾರ ಜೋಗ ಜಲಪಾತಕ್ಕೆ ದಿಢೀರನೆ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

‘ಎರಡು ದಿನಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು 1,500ಕ್ಕೂ ಹೆಚ್ಚಿನ ಪ್ರವಾಸಿ ವಾಹನಗಳಲ್ಲಿ ಬಂದಿದ್ದಾರೆ. ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ₹2 ಲಕ್ಷಕ್ಕೂ ಅಧಿಕ ಆದಾಯ ಸಂಗ್ರಹವಾಗಿದೆ’ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಬಿಸಿಲಿನಲ್ಲಿ ಕಂಗೊಳಿಸುತ್ತಿದ್ದ ಜಲಸಿರಿಯ ವೈಭವಕ್ಕೆ ಬೆರಗಾಗಿ ಪ್ರವಾಸಿಗರು ಜೋಗದ ಗುಂಡಿಯ ಮಾರ್ಗದಲ್ಲಿ ಇಳಿಯಲು ಪ್ರಯತ್ನ ನಡೆಸಿದರು. ಜೋಗದ ಗುಂಡಿಯ ಮಾರ್ಗಕ್ಕೆ ಪ್ರವೇಶ ನಿಷೇಧಿಸಿರುವ ಪ್ರಾಧಿಕಾರ ಸೂಕ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಯುವ ಸಮೂಹಕ್ಕೆ ನಿರಾಸೆಯಾಯಿತು.

ಸ್ಥಳೀಯ ವ್ಯಾಪಾರಿಗಳ ಬಳಿಯಿದ್ದ ಸಾಮಗ್ರಿಗಳೆಲ್ಲವೂ ಎರಡು ದಿನಗಳಲ್ಲಿಯೇ ಖಾಲಿಯಾಗಿದ್ದು, ಅವರ ಮುಖಗಳಲ್ಲಿ ಸಂತಸ ಮನೆ ಮಾಡಿತ್ತು. ಶರಾವತಿ ಕಣಿವೆ ಪ್ರದೇಶದಲ್ಲಿರುವ ಎಲ್ಲಾ ವಸತಿ ಗೃಹಗಳು, ಹೋಂ ಸ್ಟೇಗಳು ಭರ್ತಿಯಾಗಿ ಪ್ರವಾಸಿಗರು ವಸತಿ ವ್ಯವಸ್ಥೆಗೆ ಶನಿವಾರ ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.